ಈ ಪ್ರದೇಶದ ಕಾರ್ಯಾಚರಣೆಗಾಗಿ ಹೊಸ ಯುದ್ಧ ಟ್ಯಾಂಕ್‌ಗಳನ್ನು ನಿಯೋಜಿಸಿದ ಭಾರತೀಯ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ-ಚೀನಾ ಗಡಿ ಲಡಾಖ್ ಪ್ರದೇಶದಲ್ಲಿ ಭಾರತೀಯ ಸೇನೆಯು ಹೊಸ ಟ್ಯಾಂಕ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ. ಅಂತರಾಷ್ಟ್ರೀಯ ಗಡಿಯಲ್ಲಿ ಎದುರಾಳಿಗಳ ಚಲನವಲನಗಳ ಮೇಲೆ ನಿಗಾ ಇಡಲು ಸೇನೆಯು ಹೊಸ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿದೆ. 14,500 ಅಡಿ ಎತ್ತರದಲ್ಲಿರುವ ಸೇನಾ ನಿಲ್ದಾಣದಲ್ಲಿ ಹೊಸ ಶಸ್ತ್ರಾಸ್ತ್ರ ವ್ಯವಸ್ಥೆ ಮತ್ತು ಉಪಕರಣಗಳನ್ನು ಅಳವಡಿಸಲಾಗಿದೆ. ಈ ಪ್ರದೇಶದಲ್ಲಿ ಭಾರತೀಯ ಸೇನೆಯು ಸುಧಾರಿತ ಮೇಡ್ ಇನ್ ಇಂಡಿಯಾ ಧನುಷ್ ಹೊವಿಟ್ಜರ್ ಅನ್ನು ಪರಿಚಯಿಸಿದೆ.

ಧನುಷ್ ಹೊವಿಟ್ಜರ್ 48 ಕಿಮೀ ದೂರದ ಗುರಿಯನ್ನು ಮುಟ್ಟಬಲ್ಲದು ಮತ್ತು ಲಡಾಖ್ ಸೆಕ್ಟರ್ ರೆಜಿಮೆಂಟ್‌ಗೆ ಸೇರ್ಪಡೆಗೊಳಿಸಲಾಗಿದೆ ಎಂದು ಕ್ಯಾಪ್ಟನ್ ವಿ ಮಿಶ್ರಾ ಹೇಳಿದ್ದಾರೆ. ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ ಅಭಿವೃದ್ಧಿಪಡಿಸಿದ 114 ಬಂದೂಕುಗಳು ಸಹ ಭಾರತೀಯ ಸೇನೆಗೆ ಸೇರುತ್ತವೆ. ಗುಂಡಿನ ಚಕಮಕಿಯ ಸಮಯದಲ್ಲಿ, ವೇಗವಾಗಿ ಚಲಿಸುವ ವಾಹನಗಳನ್ನು ಫೀಲ್ಡಿಗಿಳಿಸಿದ್ದಾರೆ.

M4 ಕ್ವಿಕ್ ರಿಯಾಕ್ಷನ್ ಫೋರ್ಸ್ ವಾಹನಗಳನ್ನು ಪೂರ್ವ ಲಡಾಖ್ ಸೆಕ್ಟರ್‌ನ ಮುಂಭಾಗದ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಶತ್ರು ಟ್ಯಾಂಕ್ ಶಸ್ತ್ರಸಜ್ಜಿತ ಹೋರಾಟದ ವಾಹನಗಳನ್ನು ಎದುರಿಸಲು ಪಡೆಗಳನ್ನು ಸಜ್ಜುಗೊಳಿಸಲು, ಭಾರತೀಯ ಸೇನೆಯು ಪೂರ್ವ ಲಡಾಖ್ ಸೆಕ್ಟರ್‌ನಲ್ಲಿ ಸ್ಪೈಕ್ ಆಂಟಿ-ಟ್ಯಾಂಕ್ ಮಾರ್ಗದರ್ಶಿ ಕ್ಷಿಪಣಿಗಳನ್ನು ಸಹ ನಿಯೋಜಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!