ರಾತ್ರಿ ಪೂರ್ತಿ ಪಾಕ್ ನೆಲದಲ್ಲಿ ‘ದೀಪಾವಳಿ’ ಆಚರಿಸಿದ ಭಾರತೀಯ ಸೇನೆ: ಕರಾಚಿ ಸಹಿತ ಪ್ರಮುಖ ನಗರಗಳು ಚಿಂದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸೇನೆ ಪಾಕಿಸ್ತಾನಕ್ಕೆ ನುಗ್ಗಿ ಕಳೆದ ರಾತ್ರಿ ಪೂರ್ತಿ ಅಕ್ಷರಶಃ ‘ದೀಪಾವಳಿ’ ಆಚರಿಸಿದೆ!
ಒಂದೆಡೆ ‘ವಿಕ್ರಾಂತ್’ ಸಾರಥ್ಯದಲ್ಲಿ ಕರಾಚಿ ಬಂದರು ಸರ್ವನಾಶವಾಗಿದ್ದರೆ ಇನ್ನೊಂದೆಡೆ ಪಾಕಿಸ್ತಾನದ ಪ್ರಮುಖ ನಗರಗಳಾದ ಇಸ್ಲಾಮಾಬಾದ್, ಕರಾಚಿ, ಲಾಹೋರ್, ರಾವಲ್ಪಿಂಡಿ ಮೊದಲಾದವುಗಳು ಸೇನೆಯ ದಾಳಿಗೆ ಚಿಂದಿಯಾಗಿವೆ.

ಕಳೆದ ರಾತ್ರಿ ಪಾಕ್, ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರದಲ್ಲಿನ ಭಾರತದ ಮಿಲಿಟರಿ ಕೇಂದ್ರಗಳ ಮೇಲೆ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ದಾಳಿ ಮಾಡುವ ಪ್ರಯತ್ನ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ನಡೆಸಿದ ದಾಳಿಗಳಿಗೆ ಪಾಕ್ ನೆಲ ತತ್ತರಿಸಿಹೋಗಿದೆ.

ಐಎನ್‌ಎಸ್ ವಿಕ್ರಾಂತ್ ನೇತೃತ್ವದಲ್ಲಿ ಯುದ್ದ ಹಡಗುಗಳು ನೇರ ಪಾಕ್ ನೆಲಕ್ಕೆ ನುಗ್ಗಿದ್ದು, 10ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಕರಾಚಿ ಬಂದರನ್ನು ಧ್ವಂಸಗೊಳಿಸಿದವು ಎಂದು ಮಾಧಶ್ಯಮಗಳು ವರದಿ ಮಾಡಿವೆ. 1971ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಕರಾಚಿ ಮೇಲೆ ದಾಳಿ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!