March 15, 2026
Sunday, March 15, 2026
spot_img

ಪೂಂಚ್ ನಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ: ಭಾರತೀಯ ಸೇನೆಯ JCO ಹುತಾತ್ಮ

ಹೊಸ ದಿಗಂತ ಡಿಟಿಎಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ವೇಳೆ ಜ್ಯೂನಿಯರ್ ಕಮಿಷನ್ಡ್ ಆಫೀಸರ್ (JCO) ಹುತಾತ್ಮರಾಗಿದ್ದಾರೆ .

ಈ ಕುರಿತು ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ದೃಢಪಡಿಸಿದ್ದು, ಆಪರೇಷನ್ ಶೇರಿ ಕಲಾನ್‌ ಭಾಗವಾಗಿ ಪೂಂಚ್‌ನ ಸಾಮಾನ್ಯ ಪ್ರದೇಶದಲ್ಲಿನಡೆದ ಕಾರ್ಯಾಚರಣೆಯ ಸಮಯದಲ್ಲಿ ಸುಬೇದಾರ್ ಸಂದೀಪ್ ಕುಮಾರ್ ಢಾಕಾ ಜಾರಿಬಿದಿದ್ದಾರೆ. ಈ ವೇಳೆ ಕೂಡಲೇ ಅವರನ್ನು ಪೋಥಾದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ.

ಈ ದು:ಖದ ಸಂದರ್ಭ ಆಗಲಿದ ಯೋಧನ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ವೈಟ್ ನೈಟ್ ಕಾರ್ಪ್ಸ್ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !