ಹೊಸದಿಗಂತ ಡಿಜಿಟಲ್ ಡೆಸ್ಕ್;
ಉಗ್ರರ ವಿರುದ್ಧ ಭಾರತೀಯ ಸೇನೆಯ ಕಾರ್ಯಾಚರಣೆ ಶುರುವಾಗಿದ್ದು, ಈಗಾಗಲೇ ಕುಲ್ಗಾಮ್ ಜಿಲ್ಲೆಯ ಮುತಲ್ಹಾಮಾ ಗ್ರಾಮದಲ್ಲಿ ಉಗ್ರ ಝಾಕೀರ್ ಅಹ್ಮದ್ ಗಣಿ, ಶೋಪಿಯಾನ್‌ನ ಚೋಟಿಪೋರಾ ಗ್ರಾಮದಲ್ಲಿ ಎಲ್‌ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಉಗ್ರನ ಮನೆಯನ್ನು ನೆಲಸಮಗೊಳಿಸಲಾಗಿದೆ.
ಇದೀಗ ಉಗ್ರರಿಗೆ ಹಣಕಾಸು ಸಹಾಯ ಮಾಡಿರುವ ಶಂಕೆಯಲ್ಲಿ ಅನಂತನಾಗ್ ಜಿಲ್ಲೆಯಲ್ಲಿ 175 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅದರ ಜೊತೆ ಜೊತೆಯಲ್ಲಿ ಕುಪ್ವಾರದಲ್ಲಿ ಕೂಂಬಿಂಗ್ ವೇಳೆ 8 ಎಕೆ 47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ಜಪ್ತಿ ಮಾಡಲಾಗಿದೆ.
ಈಗಾಗಲೇ ಭಾರತ ಸರಕಾರ ಪಾಕಿಸ್ತಾನ ಪ್ರಜೆಗಳು ದೇಶ ತೊರೆಯಲು 48 ಗಂಟೆ ಗಡುವು ನೀಡಿತ್ತು. ಈ ಬೆನ್ನಲ್ಲೇ ಭಾರತಕ್ಕೆ ಭೇಟಿ ನೀಡಿದ ಒಟ್ಟು 191 ಪಾಕಿಸ್ತಾನಿ ಪ್ರಜೆಗಳು ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಭೂಮಾರ್ಗದ ಮೂಲಕ ವಾಪಸ್ ಮರಳಿದ್ದಾರೆ. ಇನ್ನೂ ಹಲವಾರು ಮರಳುತ್ತಿದ್ದಾರೆ.