ಉಕ್ರೇನ್-ರಷ್ಯಾ ಸಂಘರ್ಷ: ಭಾರತದಿಂದ ಮಾತ್ರ ನಡೆಯುತ್ತಿದೆ ತನ್ನ ಪ್ರಜೆಗಳ ರಕ್ಷಣಾ ಕಾರ್ಯಚರಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನೂ ಕಂಡು ವಿಶ್ವದ ಅತ್ಯಂತ ಪ್ರಬಲ ಎಂದು ಕರೆಸಿಕೊಳ್ಳುವ ರಾಷ್ಟ್ರಗಳೇ ತಮ್ಮ ಪ್ರಜೆಗಳನ್ನು ಉಕ್ರೇನ್‌ ನಿಂದ ಪಾರು ಮಾಡಲು ಸಾಧ್ಯವಾಗುತ್ತಿಲ್ಲ.
ಇಡೀ ವಿಶ್ವದಲ್ಲಿ ಭಾರತ ಸರ್ಕಾರ ಮಾತ್ರ ಉಕ್ರೇನ್‌ ನಲ್ಲಿನ ತನ್ನ ಪ್ರಜೆಗಳನ್ನು ಪಾರು ಮಾಡುವ ಸಾಹಸ ಮಾಡುತ್ತಿದೆ. ಅಮೆರಿಕ, ಚೀನಾ, ಜರ್ಮನಿ ಸೇರಿದಂತೆ ಇತರೆ ರಾಷ್ಟ್ರಗಳು ರಷ್ಯಾ ಎದುರು ವಾಕ್ಸಮರ ಮಾಡುತ್ತಿವೆಯೇ ಹೊರತು ತಮ್ಮ ಪ್ರಜೆಗಳನ್ನು ಉಳಿಸುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ.
ಉಕ್ರೇನ್‌ ನಲ್ಲಿ ಚೀನಾದ 6 ಸಾವಿರ ಪ್ರಜೆಗಳಿದ್ದರೂ ಕೂಡ ಅವರ ರಕ್ಷಣೆಗೆ ಚೀನಾ ಸರ್ಕಾರ ಮುಂದಾಗಲಿಲ್ಲ. ಇನ್ನು ವಿಶ್ವದ ದೊಡ್ಡಣ್ಣ ಅಮೆರಿಕ ರಷ್ಯಾ ದಾಳಿ ಬಳಿಕ ನೀಡಿದ ಹೇಳಿಕೆಯಲ್ಲಿ ತನ್ನ ಪ್ರಜೆಗಳನ್ನು ಉಕ್ರೇನ್‌ ನಿಂದ ತೆರವು ಗೊಳಿಸುವುದು ಅಸಾಧ್ಯ ಎಂದಿದೆ.
ಇನ್ನು ಯುರೋಪ್‌ ಹಾಗೂ ಜರ್ಮನಿ ಸರ್ಕಾರಗಳು ಉಕ್ರೇನ್‌ ನಲ್ಲಿನ ತಮ್ಮ ರಾಯಭಾರ ಕಚೇರಿಗಳನ್ನೇ ಮುಚ್ಚಿ ರಕ್ಷಣಾ ಕಾರ್ಯಾಚರಣೆಯನ್ನು ಕೈಬಿಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿದ ಪಿಟಿಐ ಸುದ್ದಿ ಸಂಸ್ಥೆ, ಉಕ್ರೇನ್‌ ನಲ್ಲಿ ಸುಮಾರು 80 ಸಾವಿರ ವಿದೇಶಿ ಪ್ರಜೆಗಳು ವಿದ್ಯಾಭ್ಯಾಸಕ್ಕೆಂದು ವಾಸವಾಗಿದ್ದು, ಅದರಲ್ಲಿ ಹೆಚ್ಚಿನವರು ಭಾರತ, ಮೊರೊಕೋ, ಅಜೆರ್ಬೂಜಾನ್‌, ತುರ್ಕ್ಮೆನಿಸ್ತಾನ್‌, ನೈಜೀರಿಯಾದವರಾಗಿದ್ದಾರೆ.
ಭಾರತ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಉಕ್ರೇನ್‌ ನಲ್ಲಿನ ರಾಯಭಾರ ಕಚೇರಿಯನ್ನು ಹಗಲು ರಾತ್ರಿ ಶ್ರಮಿಸುವಂತೆ ಸೂಚಿಸಿದೆ. ಈ ನಡುವೆ ಭಾರತದಿಂದ ಏರ್‌ ಇಂಡಿಯಾ, ಇಂಡಿಗೋ, ಹಾಗೂ ಸ್ಪೈಸ್‌ ಜೆಟ್‌ ವಿಮಾನಗಳು ʼಆಪರೇಷನ್‌ ಗಂಗಾʼ ಹೆಸರಿನಡಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!