ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಫುಟ್ಬಾಲ್ ತಂಡ: ಕೇಂದ್ರ ಸರಕಾರದಿಂದ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
 
ಚೀನಾದದಲ್ಲಿ ಸೆಪ್ಟೆಂಬರ್’ನಲ್ಲಿ ನಡೆಯಲಿರುವ 2023ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಪುರುಷರ ಮತ್ತು ಮಹಿಳಾ ಫುಟ್ಬಾಲ್ ತಂಡಗಳು ಭಾಗವಹಿಸಲಿವೆ ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬುಧವಾರ ತಿಳಿಸಿದ್ದಾರೆ.

ಟಾಪ್ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಮಾನದಂಡಗಳನ್ನು ಪೂರೈಸದಿದ್ದರೂ, ಕ್ರೀಡಾ ಸಚಿವಾಲಯವು ಭಾರತದ ಫುಟ್ಬಾಲ್ ತಂಡಗಳಿಗೆ ವಿನಾಯಿತಿ ನೀಡಿ ಅವಕಾಶ ನೀಡಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

ಭಾರತದ ಪುರುಷರ ಫುಟ್ಬಾಲ್ ತಂಡವು ಪ್ರಸ್ತುತ ಏಷ್ಯಾದಲ್ಲಿ 18ನೇ ಸ್ಥಾನದಲ್ಲಿದ್ದರೆ, ಮಹಿಳೆಯರು 10ನೇ ಸ್ಥಾನದಲ್ಲಿದ್ದಾರೆ. ಕ್ರೀಡಾ ಸಚಿವಾಲಯದ ನಿಯಮದ ಪ್ರಕಾರ, ತಂಡ ಕ್ರೀಡೆಯಲ್ಲಿ ಅಗ್ರ ಎಂಟರಲ್ಲಿರುವವರಿಗೆ ಮಾತ್ರ ಅನುಮೋದನೆ ಸಿಗುತ್ತದೆ. ಆದ್ರೆ ಈ ಬಾರಿ ಅವಕಾಶ ನೀಡಿದೆ.

ಈ ಕುರಿತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿದ್ದು, “ಭಾರತೀಯ ಫುಟ್ಬಾಲ್ ಪ್ರೇಮಿಗಳಿಗೆ ಸಿಹಿ ಸುದ್ದಿ! ನಮ್ಮ ರಾಷ್ಟ್ರೀಯ ಫುಟ್ಬಾಲ್ ತಂಡಗಳು, ಪುರುಷರ ಮತ್ತು ಮಹಿಳೆಯರ ಎರಡೂ ಮುಂಬರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಜ್ಜಾಗಿವೆ. ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಅಸ್ತಿತ್ವದಲ್ಲಿರುವ ಮಾನದಂಡದ ಪ್ರಕಾರ ಅರ್ಹತೆ ಪಡೆಯದ ಎರಡೂ ತಂಡಗಳ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ನಿಯಮಗಳನ್ನು ಸಡಿಲಿಸಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!