ಇಂದು ಭಾರತೀಯ ನೌಕಾಪಡೆ ದಿನ: ಈ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದಾದ್ಯಂತ ಪ್ರತಿವರ್ಷ ಡಿಸೆಂಬರ್‌ 4 ರಂದು ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ. ನೌಕಾಪಡೆಯ ಶಕ್ತಿಯ ಸಂಕೇತವಾಗಿ ನಾವು ಈ ದಿನವನ್ನು ಆಚರಿಸುತ್ತೇವೆ.

ಭಾರತೀಯ ಜಲಗಡಿಗಳಲ್ಲಿ ದೇಶ ಕಾಯುವ ಯೋಧರನ್ನು ನೆನೆಯುವ ಹಾಗೂ ವಿವಿಧ ಕಾರ್ಯಾಚರಣೆಗಳಲ್ಲಿ ವೀರಮರಣ ಹೊಂದಿದ ನೌಕಾಯೋಧರನ್ನು ಸ್ಮರಿಸುವುದು ಈ ದಿನದ ಉದ್ದೇಶವಾಗಿದೆ. ಈ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ.

ಭಾರತೀಯ ನೌಕಾಪಡೆ ದಿನದ ಇತಿಹಾಸ

1971ರ ಡಿಸೆಂಬರ್‌ ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧದ ಸಮಯದಲ್ಲಿ ಕರಾಚಿ ಗಡಿಯಲ್ಲಿ ಭಾರತೀಯ ನೌಕಪಡೆಯ ಯೋಧರು ದೇಶಕ್ಕಾಗಿ ಹೋರಾಡಿದ್ದರು. ʼಆಪರೇಷನ್‌ ಟ್ರೈಡೆಂಟ್‌ʼ ಹೆಸರಿನ ಈ ಕಾರ್ಯಾಚರಣೆಯಲ್ಲಿ ಹಲವರು ವೀರಮರಣ ಹೊಂದಿದ್ದರು. ಅಂದು ಹೋರಾಡಿದ ವೀರಯೋಧರನ್ನು ಸ್ಮರಿಸುವ ಉದ್ದೇಶದಿಂದ ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.

ಡಿಸೆಂಬರ್‌ 3 ರಂದು ಪಾಕಿಸ್ತಾನವು ಭಾರತದ ಜಲಗಡಿಗಳಲ್ಲಿ ಆಕ್ರಮಣ ಮಾಡಲು ಆರಂಭಿಸಿತ್ತು. ಆ ಸಮಯದಲ್ಲಿ ಭಾರತೀಯ ನೌಕಾಯೋಧರು ಧೈರ್ಯದಿಂದ ಹೋರಾಡಿ ಪಾಕಿಸ್ತಾನ‌ದ ನಾಲ್ಕು ಹಡುಗುಗಳನ್ನು ಹೊಡೆದುರುಳಿಸಿದರು. ಆಪರೇಷನ್‌ ಟ್ರೈಡೆಂಟ್‌ ಹೆಸರಿನ ಕಾರ್ಯಾಚರಣೆಯಲ್ಲಿ ಪಿಎನ್‌ಎಸ್‌ ಖೈಬರ್‌ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡುಗುಗಳನ್ನು ಭಾರತೀಯ ಸೇನೆ ಧೈರ್ಯದಿಂದ ಮುಳುಗಿಸಿತ್ತು . ಈ ಸಂದರ್ಭದಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದರು.

ಭಾರತೀಯ ನೌಕಾಪಡೆ ದಿನದ ಮಹತ್ವ

ತಮ್ಮ ಪ್ರಾಣವನ್ನೂ ಲೆಕ್ಕಿಸದೇ ದೇಶ ರಕ್ಷಣೆಗಾಗಿ ಹೋರಾಡಿ ವೀರಮರಣ ಹೊಂದಿದ ವೀರಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್‌ 4 ರಂದು ಭಾರತೀಯ ನೌಕಾಪಡೆಯು ದಿನವನ್ನು ಆಚರಿಸಲಾಗುತ್ತದೆ. ದೇಶ ರಕ್ಷಣೆಯ ವಿಚಾರದಲ್ಲಿ ನೌಕಾಪಡೆಯ ಕೊಡುಗೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಈ ದಿನದಂದು ಯುದ್ಧನೌಕೆಗಳು ಹಾಗೂ ವಿಮಾನಗಳ ಎಕ್ಸಿಬಿಷನ್‌ ನಡೆಯುತ್ತದೆ. ಅಲ್ಲದೆ ವಿವಿಧೆಡೆ ಸರ್ಕಾರದಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!