ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ-20 ವಿಶ್ವಕಪ್ ಗೆ ಅರ್ಹತೆ ಪಡೆದಿರುವ ತಂಡಗಳು ಈಗಾಗಲೇ ಒಂದೊಂದು ಅಭ್ಯಾಸ ಪಂದ್ಯವನ್ನೂ ಆಡಿದೆ. ಕೆಲವು ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾಗಲು ಅರ್ಹತಾ ಪಂದ್ಯಗಳನ್ನು ಆಡುತ್ತಿವೆ.
ಇದರಲ್ಲಿ ನಮೀಬಿಯಾ ತಂಡವೂ ಒಂದು. ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ನಲ್ಲಿ ನಮೀಬಿಯಾ ತಂಡಕ್ಕೆ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ.
ಇದಕ್ಕೆ ಕಾರಣವಿದೆ.
ನಮೀಬಿಯಾ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದುಗೊಂಡಿತ್ತು. ಈ ವೇಳೆ ನಮ್ಮ ಬೆಂಬಲ ನಮೀಬಿಯಾಕ್ಕೆ ಎಂದು ಅನೇಕ ಭಾರತೀಯರು ಹೇಳುತ್ತಿದ್ದಾರೆ. ಇದು ಅಚ್ಚರಿಯಾದರೂ ಸತ್ಯ. ಯಾಕೆಂದರೆ ಭಾರತದಲ್ಲಿ ಚೀತಾಗಳ ಸಂತತಿಯನ್ನು ವೃದ್ಧಿಸುವ ಸಲುವಾಗಿ ನಮೀಬಿಯಾ ಸರ್ಕಾರ 8 ಚೀತಾಗಳನ್ನು ಕಳುಹಿಸಿಕೊಟ್ಟಿತ್ತು. ಹೀಗಾಗಿ ನಮ್ಮ ಬೆಂಬಲ ನಮೀಬಿಯಾ ತಂಡಕ್ಕೆ ಎಂದು ಅನೇಕರು ಕಮೆಂಟ್ ಮಾಡುತ್ತಾ, ನಗೆಚಟಾಕಿ ಹಾರಿಸುತ್ತಿದ್ದಾರೆ.