ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಮಾಜಿ ಸಚಿವ ಮತ್ತು ಎಲ್‌ಡಿಎಫ್‌ನ ಶಾಸಕ ಕೆ ಟಿ ಜಲೀಲ್ ಅವರು ನೀಡಿದ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.
ಅವರು ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಎಂದಿದ್ದಾರೆ.ಅಲ್ಲದೇ, ಪಾಕ್ ಆಕ್ರಮಿತ ಕಾಶ್ಮೀರವನ್ನು ‘ಆಜಾದ್ ಕಾಶ್ಮೀರ’ ಎಂದು ಹೇಳುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದಾರೆ.
ತಮ್ಮ ಕಾಶ್ಮೀರ ಭೇಟಿಗೆ ಸಂಬಂಧಿಸಿದಂತೆ ಫೇಸ್ ಬುಕ್ ಪೋಸ್ಟ್ ನಲ್ಲಿ ಜಲೀಲ್ ಈ ಮಾತುಗಳನ್ನು ಉಲ್ಲೇಖಿಸಿದ್ದು, ‘ಪಾಕಿಸ್ತಾನಕ್ಕೆ ಸೇರ್ಪಡೆಗೊಂಡಿರುವ ಕಾಶ್ಮೀರದ ಭಾಗ ‘ಆಜಾದ್ ಕಾಶ್ಮೀರ’ವಾಗಿದ್ದು, ಅದರ ಮೇಲೆ ಪಾಕ್ ಸರ್ಕಾರದ ನೇರ ನಿಯಂತ್ರಣವಿಲ್ಲ’ ಎಂದು ಜಲೀಲ್ ಅವರು ಮಲಯಾಳಂನಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಭಾರತದ ಅಧೀನ ಜಮ್ಮು ಮತ್ತು ಕಾಶ್ಮೀರ’ (ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ) ಜಮ್ಮು, ಕಾಶ್ಮೀರ ಕಣಿವೆ ಮತ್ತು ಲಡಾಖ್‌ನ ಭಾಗಗಳನ್ನು ಒಳಗೊಂಡಿದೆ’ ಎಂದು ಜಲೀಲ್ ಹೇಳಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಹಿಂದಿನ ಎಲ್‌ಡಿಎಫ್ ಸರ್ಕಾರದಲ್ಲಿ ಜಲೀಲ್ ಸಚಿವರಾಗಿದ್ದರು.