ರಷ್ಯಾದಿಂದ 30 ಲಕ್ಷ ಬ್ಯಾರೆಲ್‌ ತೈಲ ಖರೀದಿಗೆ ಇಂಡಿಯನ್‌ ಆಯಿಲ್‌ ಒಪ್ಪಂದ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಭಾರತದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಲೀ. (ಐಒಸಿ) ರಷ್ಯಾದಿಂದ 30 ಲಕ್ಷ ಬ್ಯಾರೆಲ್‌ ತೈಲ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ.
ಅಮೇರಿಕಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿವೆ. ನಿರ್ಭಂಧದಿಂದ ರಷ್ಯಾ ಆರ್ಥಿಕತೆಗೆ ತೀವ್ರ ಹೊಡೆತ ಬಿದ್ದಿದ್ದು, ಭಾರತಕ್ಕೆ ತೈಲವನ್ನು ರಿಯಾಯಿತಿ ದರದಲ್ಲಿ ನೀಡಲು ರಷ್ಯಾ ಮುಂದಾಗಿತ್ತು. ಈ ಬೆನ್ನಲ್ಲೇ ಭಾರತದ ದೊಡ್ಡ ಪೆಟ್ರೋಲಿಯಂ ಸಂಸ್ಥೆ ರಷ್ಯಾದೊಂದಿಗೆ ತೈಲ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ರಷ್ಯಾದಿಂದ ಹೆಚ್ಚಿನ ಪ್ರಮಾನದ ತೈಲ ಖರೀದಿಸಲು ಭಾರತದ ಕಂಪನಿಗೆ ಯಾವುದೇ ನಿರ್ಬಂಧಗಳು ಇಲ್ಲವಾದರೂ , ತೈಲ ಖರೀದಿ ಬೇಡ ಎಂದು ಅಮೇರಿಕಾ ಸೇರಿ ಕೆಲ ರಾಷ್ಟ್ರಗಳು ಪರೋಕ್ಷ ಒತ್ತಡ ಹೇರುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿದ್ದ ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಗೆರ ರಾಜಕೀಯ ಬೆರೆಸಬೇಡಿ ಎಂದು ಹೇಳಿಕೆ ನೀಡಿತ್ತು.
ಭಾರತದ ಇನ್ನೂ ಹಲವು ಕಂಪನಿಗಳು ರಷ್ಯಾದಿಂದ ತೈಲ ಖರೀದಿಗೆ ಮುಂದಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!