ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ವೈವಿಧ್ಯತೆ ವಿಭಾಗ ಮುಖ್ಯಸ್ಥರಾಗಿದ್ದ ಭಾರತೀಯ ಮೂಲದ ನೀಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.
ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯು ನೀಲಾ ರಾಜೇಂದ್ರ ಅವರನ್ನು ವಜಾಗೊಳಿಸಿದ ಬಗ್ಗೆ ಉನ್ನತ ಬಾಹ್ಯಾಕಾಶ ಪ್ರಯೋಗಾಲಯದ ಸಿಬ್ಬಂದಿಗೆ ಈ ಮೇಲ್ ಮೂಲಕ ತಿಳಿಸಿತ್ತು. ನೀಲಾ ರಾಜೇಂದ್ರ ಅವರು ಇನ್ನು ಮುಂದೆ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡುತ್ತಿಲ್ಲ. ನಮ್ಮ ಸಂಸ್ಥೆಗೆ ಅವರು ನೀಡಿರುವ ಕೊಡುಗೆ, ಶಾಶ್ವತ ಪರಿಹಾರಗಳಿಗೆ ನಾವು ಕೊನೆವರೆಗೂ ಕೃತಜ್ಞರಾಗಿರುತ್ತೇವೆ. ಅವರಿಗೆ ಭವಿಷ್ಯಕ್ಕೆ ಶುಭ ಹಾರೈಕೆಗಳು ಎಂದು ಕಳಿಸಿತ್ತು.
ಕಳೆದ ವರ್ಷ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬ್ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ನಲುಗಿತ್ತು. ಆಗ ಹಲವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆದರೆ ತೆಗೆದುಹಾಕದ ಕೆಲವೇ ಸಿಬ್ಬಂದಿಗಳಲ್ಲಿ ನೀಲಾ ರಾಜೇಂದ್ರ ಕೂಡ ಒಬ್ಬರಾಗಿದ್ದರು.