ಭಾರತೀಯ ರೈಲ್ವೆ ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದ್ದು, ಪ್ರಯಾಣದ ಅನುಭವ ಸುಲಭವಾಗಿಸಲು ವಿವಿಧ ಸಹಾಯ ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ. ವಿಶೇಷವಾಗಿ ಮಕ್ಕಳೊಂದಿಗೆ ಪ್ರಯಾಣ ಮಾಡುವ ಪೋಷಕರಿಗೆ, ಟಿಕೆಟ್ ಮತ್ತು ಸೀಟಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಗಳು ಜಾರಿಯಲ್ಲಿವೆ.
1ರಿಂದ 4 ವರ್ಷ ವಯಸ್ಸಿನ ಮಕ್ಕಳು: ಉಚಿತ ಪ್ರಯಾಣ
ಭಾರತೀಯ ರೈಲ್ವೆಯ ಪ್ರಕಾರ, ಮಗುವಿಗೆ 1ರಿಂದ 4 ವರ್ಷ ವಯಸ್ಸಿದ್ದರೆ, ಯಾವುದೇ ಟಿಕೆಟ್ ತೆಗೆದುಕೊಳ್ಳಬೇಕಾಗಿಲ್ಲ. ಮಗು ಪೋಷಕರೊಂದಿಗೆ ಉಚಿತವಾಗಿ ಪ್ರಯಾಣಿಸಬಹುದು. ಆದರೆ, ಈ ವಯಸ್ಸಿನ ಮಗುವಿಗೆ ಅಲೊಟೆಡ್ ಸೀಟ್ ಅಥವಾ ಬರ್ತ್ ದೊರೆಯದು. ಪೋಷಕರೊಬ್ಬರು ತಮ್ಮ ಸೀಟಿನಲ್ಲಿ ಮಗುವನ್ನು ಕುರಿಸಿಕೊಳ್ಳಬೇಕು.
5ರಿಂದ 12 ವರ್ಷ ವಯಸ್ಸಿನ ಮಕ್ಕಳು: ಅರ್ಧ ಟಿಕೆಟ್
ಮಗುವಿನ ವಯಸ್ಸು 5ರಿಂದ 12ರ ನಡುವೆ ಇದ್ದರೆ, ಅವರಿಗೆ ಅರ್ಧ ಬೆಲೆಯಲ್ಲಿ ಟಿಕೆಟ್ ಲಭ್ಯವಿದೆ. ಆದರೆ ಈ ಅರ್ಧ ಟಿಕೆಟ್ನೊಂದಿಗೆ ಮಗುವಿಗೆ ಪ್ರತ್ಯೇಕ ಬರ್ತ್ ಅಥವಾ ಆಸನ ನೀಡಲಾಗದು. ಪೋಷಕರ ಸೀಟಿನಲ್ಲಿ ಅವನನ್ನು ಅಡ್ಜಸ್ಟ್ ಮಾಡಬೇಕಾಗುತ್ತದೆ. ಮಗುವಿಗೆ ಪ್ರತ್ಯೇಕ ಸೀಟ್ ಬೇಕೆಂದರೆ, ಪೂರ್ಣ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ.
13 ವರ್ಷ ಹಾಗೂ ಮೇಲ್ಪಟ್ಟವರು: ಫುಲ್ ಟಿಕೆಟ್ ಕಡ್ಡಾಯ
ವಯಸ್ಸು 13 ವರ್ಷ ಅಥವಾ ಅದಕ್ಕಿಂತ ಹೆಚ್ಚು ಆದ ಮಕ್ಕಳಿಗೆ ಯಾವುದೇ ರಿಯಾಯಿತಿ ಇಲ್ಲ. ಇವರಿಗೆ ಪೂರ್ಣ ಟಿಕೆಟ್ ಕಡ್ಡಾಯವಾಗಿದೆ. ವಯಸ್ಸು ನಿರ್ಧರಿಸಲು ರೈಲ್ವೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆ ಇರುತ್ತದೆ.
ಟಿಕೆಟ್ ಬುಕಿಂಗ್ ಸಮಯದಲ್ಲಿ ಮಗುವಿನ ವಯಸ್ಸು ಎಷ್ಟು ಎಂಬುದನ್ನು ಸರಿಯಾದ ದಾಖಲೆಗಳಿಂದ ಸಾಬೀತುಪಡಿಸಬೇಕು.
ಜನನ ಪ್ರಮಾಣಪತ್ರ, ಶಾಲಾ ಗುರುತಿನ ಚೀಟಿ ಅಥವಾ ಅಧಿಕೃತ ಗುರುತಿನ ಚೀಟಿ ಹೊಂದಿರುವುದು ಅನಿವಾರ್ಯ.
ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗಬಹುದು.
ಈ ನಿಯಮಗಳು ಸಮಯಾನುಗುಣವಾಗಿ ಬದಲಾಯಿಸಬಹುದಾಗಿವೆ, ಐಆರ್ ಸಿಟಿಸಿ ಅಥವಾ ಸ್ಥಳೀಯ ರೈಲ್ವೆ ಕಚೇರಿ ಮೂಲಕ ವಿಷಯ ಪರಿಶೀಲಿಸಿ.(ಸಾಮಾಜಿಕ ಜಾಲತಾಣದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟವಾಗಿದೆ)