ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರಗಳಲ್ಲಿ ಮೆಟ್ರೋ ರೈಲುಗಳನ್ನು ನೋಡಿದ್ದೇವೆ. ಆದರೆ ಭಾರತೀಯ ರೈಲ್ವೆ ಇಲಾಖೆಯು ನಗರಗಳ ಸಮೀಪ ವಾಸಿಸುವ ಜನರಿಗಾಗಿ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ. ವಿವಿಧ ಕೆಲಸಗಳಿಗಾಗಿ ನಗರಗಳಿಗೆ ಬರುವ ಜನರಿಗಾಗಿ ‘ವಂದೇ ಮೆಟ್ರೋ’ ಆರಂಭಿಸಲು ನಿರ್ಧರಿಸಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ರೀತಿ ʻವಂದೇ ಮೆಟ್ರೊʼ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ (ಫೆಬ್ರವರಿ 1, 2023) ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ನಂತರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಘೋಷಣೆ ಮಾಡಿದ್ದಾರೆ.
ದೊಡ್ಡ ನಗರಗಳ ಸಮೀಪವಿರುವ ಪಟ್ಟಣಗಳಿಂದ ನಗರಗಳಿಗೆ ಅನುಕೂಲಕರ ಪ್ರಯಾಣಕ್ಕೆ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ಮಿನಿ ಆವೃತ್ತಿ ‘ವಂದೇ ಮೆಟ್ರೋ’ ರೈಲುಗಳನ್ನು ಪರಿಚಯಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಈ ವಂದೇ ಮೆಟ್ರೋ ರೈಲುಗಳು ನೌಕರರು, ವ್ಯಾಪಾರಿಗಳು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಎಂದು ಹೇಳಿದರು. ವಂದೇ ಭಾರತ್‌ನಂತೆಯೇ ‘ವಂದೇ ಮೆಟ್ರೋ’ ಕೂಡ ಲಭ್ಯವಿದೆ ದೊಡ್ಡ ನಗರಗಳಿಂದ 50-60 ಕಿಮೀ ದೂರದಲ್ಲಿರುವ ಜನರು ವಿವಿಧ ರೀತಿಯ ಕೆಲಸಗಳಿಗಾಗಿ ನಗರಕ್ಕೆ ಹಿಂತಿರುಗಲು ಸಾಧ್ಯವಾಗುವಂತೆ ವಂದೇ ಭಾರತ್ ಮೆಟ್ರೋವನ್ನು ತರಲು ಪ್ರಧಾನಿ ನಿರ್ಧರಿಸಿದ್ದಾರೆ.
ವಂದೇ ಮೆಟ್ರೋದ ವಿನ್ಯಾಸ ಮತ್ತು ನಿರ್ಮಾಣ ಈ ವರ್ಷ ಪೂರ್ಣಗೊಳ್ಳಲಿದೆ. ಮುಂದಿನ ಆರ್ಥಿಕ ವರ್ಷದಿಂದ ಇವುಗಳನ್ನು ಸೇವೆಗೆ ತರಲು ಪ್ರಯತ್ನಿಸುತ್ತಿದ್ದೇವೆ ಎಂದರು. ಭಾರತದಲ್ಲಿ ತಯಾರಾದ ಮೊದಲ ‘ಹೈಡ್ರೋಜನ್ ರೈಲು’ ಡಿಸೆಂಬರ್ 2023 ರ ವೇಳೆಗೆ ಲಭ್ಯವಾಗಲಿದೆ ಎಂದರು.
ಈ ಬಾರಿ ಬಜೆಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2023-24 ರ ಹಣಕಾಸು ವರ್ಷಕ್ಕೆ ರೈಲ್ವೆಗೆ ರೂ.2.42 ಲಕ್ಷ ಕೋಟಿಗಳನ್ನು ನಿಗದಿಪಡಿಸುವುದಾಗಿ ಬುಧವಾರ ಘೋಷಿಸಿದ್ದಾರೆ. ಹೀಗಾಗಿ ಭಾರತೀಯ ರೈಲ್ವೇ ಇಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಭಾಗವಾಗಿ ‘ವಂದೇ ಮೆಟ್ರೊ’ ರೈಲುಗಳ ನಿರ್ಧಾರ ಕೈಗೊಳ್ಳಲಾಗಿದೆ.