ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಪ್ಲಿಸಿಟಿಗೆ ಬ್ರ್ಯಾಂಡ್ ಅಂಬಾಸಿಡರ್ ಆದ ನಟಿ ಸಾಯಿ ಪಲ್ಲವಿ ಫೇರ್‌ನೆಸ್ ಕ್ರೀಮ್‌ನ ಜಾಹೀರಾತೊಂದನ್ನು ರಿಜೆಕ್ಟ್ ಮಾಡಿದ್ದರಂತೆ.
ಕ್ರೀಮ್ ಹಚ್ಚೋದ್ರಿಂದ ಬೆಳ್ಳಗಾಗ್ತಾರೆ ಅಂತಲೋ ನಿಮ್ಮ ಸ್ಕಿನ್ ಟೋನ್ ಬದಲಾಯಿಸಿ ಎಂದು ನಾನು ಭಾರತೀಯರಿಗೆ ಹೇಳೋದಿಲ್ಲ. ನಮ್ಮಲ್ಲಿ ಪ್ರತೀ ಹೆಣ್ಣು ಮಕ್ಕಳಲ್ಲೂ ಸೌಂದರ್ಯ ಇದೆ. ಬಣ್ಣ ಹೇಗಿದೆ ಹಾಗೆ ಪ್ರೀತಿಸೋದು ಬೆಸ್ಟ್ ಎಂದು ಹೇಳಿ ಸಾಯಿ ಪಲ್ಲವಿ ಎಲ್ಲರ ಮನ ಗೆದ್ದಿದ್ದರು.
ಜಾಹೀರಾತುಗಳಿಂದ ಬಂದ ಹಣವನ್ನು ಏನು ಮಾಡೋದು. ನಾನು ಮನೆಗೆ ಹೋಗಿ ಮೂರು ಚಪಾತಿ ತಿನ್ನುತ್ತೇನೆ ಅಷ್ಟೆ. ನನಗೆ ದೊಡ್ಡ ಆಸೆಗಳಿಲ್ಲ ಎಂದು ಸಾಯಿ ಪಲ್ಲವಿ ಹೇಳಿದ್ದರು. ಈ ಮೂಲಕ ಅವರು ಎಲ್ಲ ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದರು. ಸಾಯಿ ಪಲ್ಲವಿಗೆ ಫೇರ್‌ನೆಸ್ ಕ್ರೀಂ ಜಾಹೀರಾತಿಗೆ 2 ಕೋಟಿ ರೂ. ಸಿಕ್ಕಿತ್ತು. ಆದರೆ, ಇದನ್ನು ನಟಿ ತಿರಸ್ಕರಿಸಿದ್ದಾರೆ.