ಕೆನಡಾದಲ್ಲಿ ಅಪರಿಚಿತರ ನಡುವೆ ನಡೆದ ಭೀಕರ ಗುಂಡಿನ ದಾಳಿಗೆ ಭಾರತೀಯ ವಿದ್ಯಾರ್ಥಿನಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೆನಡಾದಲ್ಲಿ ನಡೆದ ಗುಂಡಿನ ದಾಳಿಯೊಂದರಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಅಪರಿಚಿತರ ನಡುವೆ ನಡೆದ ಗುಂಡಿನ ದಾಳಿಯ ವೇಳೆ ಅಕಸ್ಮಾತಾಗಿ ಗುಂಡು ತಗುಲಿ, ಭಾರತೀಯ ವಿದ್ಯಾರ್ಥಿನಿ ಹರ್​ಸಿಮ್ರತ್ ರಾಂಧಾವಾ ಮೃತಪಟ್ಟಿದ್ದಾರೆ.

ಒಂಟೋರಿಯೋದ ಹ್ಯಾಮಿಲ್ಟನ್​​ನಲ್ಲಿರುವ ಮೊಹಾಕ್ ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದ್ದ ಹರ್​ಸಿಮ್ರತ್ ರಾಂಧಾವಾ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆ ಏಕಾಏಕಿ ಅಪರಿಚಿತರ ನಡುವೆ ಗುಂಡಿನ ದಾಳಿ ಆರಂಭವಾಗಿದೆ. ಈ ವೇಳೆ ಬಸ್‌ಗಾಗಿ ಕಾಯುತ್ತಿದ್ದ ಹರ್‌ಸಿಮ್ರತ್‌ಗೆ ಗುಂಡು ತಾಕಿದೆ.

ಸ್ಥಳಿಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಗುಂಡಿನ ದಾಳಿ ಪ್ರಕರಣದಲ್ಲಿ ಭಾರತೀಯ ವಿದ್ಯಾರ್ಥಿನಿ ಅಮಾಯಕಳಾಗಿದ್ದಾಳೆ. ಎರಡು ವಾಹನಗಳ ಸವಾರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಸಾವಿನ ಮತ್ತು ಗುಂಡಿನ ದಾಳಿಯ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!