ರಷ್ಯಾ ದಾಳಿಗೆ ಉಕ್ರೇನ್‌ ನಲ್ಲಿ ಸಿಲುಕಿದ್ದ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌- ರಷ್ಯಾ ಕದನದ ತೀವ್ರತೆ ಹೆಚ್ಚಾಗುತ್ತಿದ್ದು, ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ರಷ್ಯಾ ದಾಳಿಗೆ ಬಲಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪತ್ರಕರ್ತ ಆದಿತ್ಯ ರಾಜ್‌ ಕೌಲ್‌, ಉಕ್ರೇನ್‌ ನ ಖಾರ್ಕೀವ್‌ ನಿಂದ ಭಯಾನಕ ಸುದ್ದಿ ಹೊರಬಂದಿದ್ದು, ಖಾರ್ಕಿವ್‌ ಗವರ್ನರ್‌ ಹೌಸ್‌ ನಿಂದ ಆಹಾರ ತರಲು ಹೋದ ಸಮಯದಲ್ಲಿ ರಷ್ಯಾದ ಮಿಸೈಲ್‌ ಬಂದು ಕಟ್ಟಡಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ಬಲಿಯಾಗಿದ್ದಾರೆ. ಈ ಬಗ್ಗೆ ಉಕ್ರೇನ್‌ ನಲ್ಲಿರುವ ಡಾ. ಪೂಜಾ ಮಾಹಿತಿ ನೀಡಿದ್ದು, ಸುಮಾರು 3-4 ಸಾವಿರ ಭಾರತೀಯರು ಇನ್ನೂ ಖಾರ್ಕಿವ್‌ ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದರು.
ಗವರ್ನರ್‌ ಹೌಸ್‌ ಮೇಲೆ ನಡೆದ ಭಾರೀ ಕ್ಷಿಪಣಿ ದಾಳಿಯ ವಿಡಿಯೊವನ್ನು ಆದಿತ್ಯ ಹಂಚಿಕೊಂಡಿದ್ದಾರೆ.
ಈ ಸಾವನ್ನು ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ. ಮೃತ ವಿದ್ಯಾರ್ಥಿಯನ್ನು ನವೀನ್‌ ಶೇಖರಪ್ಪ ಜ್ಞಾನಗೌಡರ್‌ ಎಂದು ಗುರುತಿಸಲಾಗಿದೆ. ಇವರು ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿ ಮೂಲದವರು. ನವೀನ್‌ ಖಾರ್ಕಿವ್‌ ರಾಷ್ಟ್ರೀಯ ವೈದ್ಯಕೀಯ ವಿವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!