SHOCKING| ಕ್ರೂಸ್ ಹಡಗಿನಲ್ಲಿದ್ದ ಭಾರತೀಯ ಮಹಿಳೆ ನಾಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಲೇಷ್ಯಾದ ಉತ್ತರ ದ್ವೀಪದ ಪೆನಾಂಗ್‌ನಿಂದ ಸಿಂಗಾಪುರಕ್ಕೆ ಮರಳುತ್ತಿದ್ದ ‘ಸ್ಪೆಕ್ಟ್ರಮ್ ಆಫ್ ಸೀಸ್‌’ ಪ್ರವಾಸಿ ಹಡಗಿನಲ್ಲಿದ್ದ ಭಾರತೀಯ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು, ಈ ಘಟನೆ ಆತಂಕ ಮೂಡಿಸಿದೆ.

64 ವರ್ಷದ ರೀತಾ ಸಹಾನಿ ನಾಪತ್ತೆಯಾದವರು. ಇವರು ತಮ್ಮ ಪತಿ ಜಾಕೇಶ್ ಸಹಾನಿ ಜೊತೆ ಈ ಹಡಗಿನಲ್ಲಿ ಪ್ರವಾಸಕ್ಕೆ ತೆರಳಿದ್ದರು. ತನ್ನ ನಾಲ್ಕು ದಿನಗಳ ಪ್ರವಾಸ ಮುಗಿಸಿ ಈ ಹಡಗು ಸಿಂಗಾಪುರಕ್ಕೆ ವಾಪಸ್ಸಾಗುತ್ತಿದ್ದು, ಪ್ರವಾಸದ ಕೊನೆಯ ದಿನವಾದ ಸೋಮವಾರ ರೀತಾ ನಾಪತ್ತೆಯಾಗಿದ್ದಾರೆ.

ಅವರ ಪತಿ ಕೊಠಡಿಯಲ್ಲಿದ್ದ ತನ್ನ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ನಡುವೆ ಸಿಂಗಾಪುರ ಜಲಸಂಧಿಯಲ್ಲಿ ಸಮುದ್ರಕ್ಕೆ ಏನೋ ಬಿದ್ದಿರುವುದು ರಕ್ಷಣಾ ವ್ಯವಸ್ಥೆಗಳಲ್ಲಿ ದಾಖಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆದಿದೆ.

ಸಿಂಗಾಪುರದ ಕಡಲ ಮತ್ತು ಬಂದರು ಪ್ರಾಧಿಕಾರವು ಕರಾವಳಿ ರಕ್ಷಣಾ ಸಮನ್ವಯ ಕೇಂದ್ರಕ್ಕೆ ಮಾಹಿತಿ ನೀಡಿ ಶೋಧ ಕಾರ್ಯ ಕೈಗೆತ್ತಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!