ಹೊಸದಿಗಂತ ಡಿಜಿಟಲ್ ಡೆಸ್ಕ್
ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಫೆನಾಲ್ಟಿ ಶೂಟೌಟ್ ಮೂಲಕ ಗೆಲುವು ಸಾಧಿಸಿದ ಭಾರತದ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ.
ಪಂದ್ಯದಲ್ಲಿ ಕೊನೆ ಕ್ಷಣದ ವರೆಗೆ ಭಾರತ 1-0 ಯಲ್ಲಿ ಮುನ್ನಡೆಯಲ್ಲಿತ್ತು.
ಅಂತಿಮ ನಿಮಿಷದಲ್ಲಿ ಫೆನಾಲ್ಟಿ ಪಡೆದ ನ್ಯೂಜಿಲ್ಯಾಂಡ್ ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿತು. ಇದರಿಂದಾಗಿ ವಿಜೇತರನ್ನು ನಿರ್ಧರಿಸಲು ಪೆನಾಟ್ಟಿ ಶೂಟೌಟ್ ನತ್ತ ಸಾಗಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ನ್ಯೂಜಿಲೆಂಡ್ ನ ಐದು ಪ್ರಯತ್ನಗಳಲ್ಲಿ ನಾಲ್ಕನ್ನು ತಡೆದ ನಾಯಕಿ ಸವಿತಾ ಪೂನಿಯಾ ಭಾರತದ ಗೆಲುವಿನ ರೂವಾರಿಯಾಗಿ ಮೂಡಿಬಂದರು. ತನಗೆ ಸಿಕ್ಕಿದ ಅವಕಾಶಗಳಲ್ಲಿ ಎರಡು ಗೋಲು ದಾಖಲಿಸಿದ ಭಾರತ 2-1ರಲ್ಲಿ ಕಂಚು ಗೆದ್ದುಕೊಂಡಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ