ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೋಟೆಲ್‌ಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಭಾರತೀಯ ವಲಸಿಗರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಭಾರತೀಯ ತ್ರಿವರ್ಣ ಧ್ವಜವನ್ನು ಬೀಸುತ್ತಾ, ಘೋಷಣೆಗಳನ್ನು ಕೂಗಿ, ಸಂಸ್ಕೃತದಲ್ಲಿ ರೋಮಾಂಚಕ ಸ್ವಾಗತ ಗೀತೆಯನ್ನು ಹಾಡುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಿದ್ದ ರಷ್ಯಾದ ಕಲಾವಿದರ ತಂಡವು ರಷ್ಯಾದ ನೃತ್ಯವನ್ನು ಪ್ರದರ್ಶಿಸಿದರು, ಇದನ್ನು ತೀವ್ರ ಆಸಕ್ತಿಯಿಂದ ಮೋದಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ.