ಹೊಸದಿಗಂತ ಡಿಜಿಟಲ್ ಡೆಸ್ಕ್:
ಜರ್ಮನಿಯಲ್ಲಿ ಐಎಸ್ಎಸ್ಎಫ್ ಜ್ಯೂನಿಯರ್ ವಿಶ್ವ ಕಪ್ ನಡೆಯುತ್ತಿದ್ದು, 10 ಮೀಟರ್ ಏರ್ ರೈಫಲ್ ಮಿಕ್ಸ್ಡ್ ವಿಭಾಗದಲ್ಲಿ ಭಾರತದ ಶೂಟರ್ಗಳಾದ ಗೌತಮಿ ಭಾನೋಟ್ ಹಾಗೂ ಅಭಿನವ್ ಶಾ ಜೋಡಿ ಚಿನ್ನದ ಪದಕ ಗೆದ್ದಿದೆ.
ಫೈನಲ್ಸ್ನಲ್ಲಿ ಫ್ರಾನ್ಸ್ನ ಓಷಾನ್ ಮುಲ್ಲರ್ ಹಾಗೂ ರೋಮೇನ್ ಆಫ್ರೇರ್ ಅವರನ್ನು 17-7ಅಂತರದಲ್ಲಿ ಸೋಲಿಸಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ರ್ವೆಯ ಪೆರ್ನೈಲ್ ನೋರ್ ವಾಲ್ ಹಾಗೂ ಜೆನ್ಸ್ ಓಲ್ಸ್ರುಡ್ ಜೋಡಿ
ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಭಾರತದ ಮತ್ತೊಂದು ಜೋಡಿ ಸ್ವಾತಿ ಚೌಧರಿ ಹಾಗೂ ಸಲೀಂ ಏಳನೇ ಸ್ಥಾನ ಗಳಿಸಿದ್ದಾರೆ.