ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸದ್ಯ ಕೇವಲ ಹತ್ತು ಕಪ್ಪು ಹುಲಿಗಳಿವೆ. ಈ ಹುಲಿಗಳು ಒಡಿಶಾದ ಸಿಂಪ್ಲಿಪಾಲ್‌ನಲ್ಲಿ ಮಾತ್ರ ಇದೆ.
ಕಳೆದ 2022ರಲ್ಲಿ ದೇಶದಾದ್ಯಂತ ನಡೆಸಿದ್ದ ಹುಲಿ ಗಣತಿಯಲ್ಲಿ ಸಿಂಪ್ಲಿಪಾಲ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ 16 ಹುಲಿಗಳಿರುವುದು ಖಚಿತಪಡಿಸಿಕೊಳ್ಳಲಾಗಿದೆ. ಈ ಪೈಕಿ ಹತ್ತು ಕಪ್ಪು ಹುಲಿಗಳು ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಏನಿದು ಕಪ್ಪು ಹುಲಿ?
ಇವುಗಳು ಇತರೆ ಹುಲಿಗಳಂತೆಯೇ ಇದ್ದರೂ ಮೈಮೇಲಿನ ಕಪ್ಪು ಪಟ್ಟಿಗಳು ಗಾಢವಾಗಿರುವ ಕಾರಣ ಇವುಗಳನ್ನು ಕಪ್ಪು ಹುಲಿಗಳು ಎಂದು ಗುರುತಿಸಲಾಗುತ್ತದೆ. ವಂಶವಾಹಿ ಸಂರಚನೆಯಲ್ಲಿಯ ವ್ಯತ್ಯಾಸದ ಕಾರಣದಿಂದಾಗಿ ಸಿಂಪ್ಲಿಪಾಲ್‌ನಲ್ಲಿರುವ ಹುಲಿಗಳು ಭಿನ್ನವಾದ ರೂಪ ಹೊಂದಿವೆ.