Friday, October 17, 2025

ಸ್ವಾಲಂಬನೆಯತ್ತ ಭಾರತದ ದಿಟ್ಟ ಹೆಜ್ಜೆ: ಗೂಗಲ್ ಮ್ಯಾಪ್ ಗೆ ಠಕ್ಕರ್ ಕೊಡಲು ಬಂತು ಸ್ವದೇಶಿ ‘ಮ್ಯಾಪಲ್ಸ್’ ಆ್ಯಪ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಸ್ವಾಲಂಬನೆಯತ್ತ ಹೆಜ್ಜೆ ಇಡುತ್ತಿದ್ದು, ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಮೂಲಕ ದೇಶಿಯ ಉತ್ಪನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತೆರಿಗೆ ಹೆಚ್ಚಳ, ಹೆಚ್1ಬಿ ವೀಸಾ ನೀತಿ ಬದಲಾವಣೆ ಬಳಿಕ ಕೇಂದ್ರ ಸರ್ಕಾರ ಸ್ವದೇಶಿ ಉತ್ಪನ್ನಗಳಿಗೆ ಒತ್ತು ನೀಡುತ್ತಿದೆ. ಇತ್ತೀಚೆಗೆ ಜಿಮೇಲ್‌ಗೆ ಬದಲು ಭಾರತದ ಸಾಫ್ಟ್‌ವೇರ್ ಕಂಪನಿಯ ಝೋಹೋ ಇಮೇಲ್‌ ಬಳಕೆಗೆ ಜನರು ಶುರು ಮಾಡಿದ್ದಾರೆ.

ಇದೀಗ ಗೂಗಲ್ ಮ್ಯಾಪ್‌ಗೆ ಪ್ರತಿಯಾಗಿ ನ್ಯಾವಿಗೇಶನ್‌ಗಾಗಿ ಮ್ಯಾಪ್ ಮೈ ಇಂಡಿಯಾ ಹೊರತಂದಿರುವ ಮ್ಯಾಪಲ್ಸ್ ಆ್ಯಪ್ ಟ್ರೆಂಡ್ ಆಗುತ್ತಿದೆ. ರೂಟ್ ಮ್ಯಾಪ್‌ಗಾಗಿ ಇದೀಗ ಗೂಗಲ್ ಮ್ಯಾಪ್‌ಗೆ ಜೋತು ಬೀಳಬೇಕಿಲ್ಲ. ಮ್ಯಾಪಲ್ಸ್ ಆ್ಯಪ್ ಅತ್ಯುತ್ತಮ ಫೀಚರ್ ಮೂಲಕ ಸೇವೆ ನೀಡುತ್ತಿದೆ. ಕೇಂದ್ರ ಸರ್ಕಾರದ ಸಚಿವರು, ನಾಯಕರು ಮ್ಯಾಪಲ್ಸ್ ಬಳಕೆಗೆ ಒತ್ತು ನೀಡಿದ್ದಾರೆ.

https://x.com/AshwiniVaishnaw/status/1977060137887027413

ಗೂಗಲ್ ಮ್ಯಾಪ್‌ಗೆ ಪ್ರತಿಸ್ಪರ್ಧಿ ಆ್ಯಪ್ ಆಗಿರುವ ಮೇಡ್ ಇನ್ ಇಂಡಿಯಾ ಮ್ಯಾಪಲ್ಸ್ ಆ್ಯಪನ್ನು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಬಳಸಿದ್ದಾರೆ. ಹಲವು ಹೊಸ ಫೀಚರ್ಸ್ ಜೊತೆಗೆ ಈ ಆ್ಯಪ್ ಕಾರ್ಯನಿರ್ವಹಿಸುತ್ತಿದೆ.

ಈ ಕುರಿತು ಅಶ್ವಿನಿ ವೈಷ್ಣವ್ ಖುದ್ದು ಕಾರಿನಲ್ಲಿ ಕುಳಿತು ಪರಿಶೀಲಿಸಿದ್ದಾರೆ.ಗೂಗಲ್ ಮ್ಯಾಪ್‌ಗಿಂತ ಹೆಚ್ಚು ನಿಖರತೆ ನೀಡುತ್ತಿದೆ.

ನ್ಯಾವಿಗೇಶನ್‌ನಲ್ಲಿ ಭಾರತದ ಮ್ಯಾಪಲ್ಸ್ ಆ್ಯಪ್ ಹಲವು ಹೊಸ ಫೀಚರ್ಸ್ ನೀಡುತ್ತಿದೆ. 3ಡಿ ಜಂಕ್ಷನ್ ವೀವ್ಯೂ, ರಿಯಲ್ ಟೈಮ್ ಡ್ರೈವಿಂಗ್ ಅಲರ್ಟ್, ಅತ್ಯಂತ ನಿಖರ ಡೂರ್ ಸ್ಟೆಪ್ ನ್ಯಾವಿಗೇಶನ್ ನೀಡುತ್ತಿದೆ. ಈ ಮೂಲಕ ಪ್ರಯಾಣವನ್ನು ಸುಲಭ ಹಾಗೂ ಸುಖಕರ ಮಾಡಲಿದೆ. ಅಪಘಾತ ವಲಯ, ಸ್ಪೀಡ್ ಬ್ರೇಕರ್ ಸೇರಿದಂತೆ ಹಲವು ಅಲರ್ಟ್‌ಗಳು ರಿಯಲ್ ಟೈಮ್‌ನಲ್ಲಿ ನೀಡಲಿದೆ. ಇದರಿಂದ ಮಂದೆ ಸ್ಪೀಡ್ ಬ್ರೇಕರ್ ಹಂಪ್ ಕುರಿತು ಎಚ್ಚರಿಕೆ ವಹಿಸಲು ಸ್ಪೀಡ್ ಕಂಟ್ರೋಲ್ ಮಾಡಲು ಸಾಧ್ಯವಿದೆ. ಟ್ರಾಫಿಕ್ ಸಿಗ್ನಲ್, ಟ್ರಾಫಿಕ್ ಕ್ಯಾಮೆರಾ ಸೇರಿದಂತೆ ಹಲವು ಎಚ್ಚರಿಕೆಗಳನ್ನು ಮ್ಯಾಪಲ್ಸ್ ಆ್ಯಪ್ ನೀಡಲಿದೆ.

ಶೀಘ್ರದಲ್ಲೇ ರೈಲ್ವೇ ಇಲಾಖೆ ಬಳಕೆ
ಕಾರಿನಲ್ಲಿ ಮ್ಯಾಪಲ್ಸ್ ನ್ಯಾವಿಗೇಶನ್ ಆ್ಯಪ್ ಬಳಕೆ ಮಾಡಿದ ಸಚಿವ ಅಶ್ವಿನಿ ವೈಷ್ಣವ್ ಫೀಚರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಖರತೆ ಈ ಆ್ಯಪ್ ವಿಶೇಷತೆ ಎಂದಿದ್ದಾರೆ.

ಇದೇ ವೇಳೆ ಶೀಘ್ರದಲ್ಲೇ ಭಾರತೀಯ ರೈಲ್ವೇ ಮ್ಯಾಪಲ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ರೈಲ್ವೇಯಲ್ಲಿ ಮ್ಯಾಪಲ್ಸ್ ನ್ಯಾವಿಗೇಶನ್ ಬಳಸಲಾಗುವುದು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

error: Content is protected !!