ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರ ಭಾರತದ ಸ್ವಚ್ಚ ನಗರಗಳ ಪಟ್ಟಿ ಪ್ರಕಟಗೊಂಡಿದೆ. ಈ ಸ್ವಚ್ಚ ಸರ್ವೇಕ್ಷಣಾ ಪಟ್ಟಿಯಲ್ಲಿ ಮತ್ತೆ ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನ ಪಡೆದುಕೊಂಡು, ಭಾರತದ ಅತ್ಯಂತ ಸ್ವಚ್ಚ ನಗರ ಅನ್ನೋ ಖ್ಯಾತಿಗೆ ಇಂದೋರ್ ಪಾತ್ರವಾಗಿದೆ. ಅದರಂತೆ ಉಳಿದ ಸ್ಥಾನಗಳಲ್ಲಿ ಯಾವೆಲ್ಲ ಸಿಟಿ ಇದೆ ಅನ್ನೋದನ್ನು ನೋಡೋಣ.
ಗುಜರಾತ್ನ ಸೂರತ್ ನಗರ 2ನೇ ಸ್ಥಾನ ಪಡೆದುಕೊಂಡಿದೆ. ನವಿ ಮುಂಬೈ 3ನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಕ್ರಮವಾಗಿ 4 ಮತ್ತು 5ನೇ ಸ್ಥಾನವನ್ನು ಆಂಧ್ರ ಪ್ರದೇಶದ ವಿಶಾಖಪಟ್ಟಣಂ, ಮತ್ತು ವಿಜಯವಾಡ ನಗರಗಳು ಸ್ಥಾನ ಪಡೆದಿದೆ.
6ನೇ ಸ್ಥಾನದಲ್ಲಿ ಮಧ್ಯಪ್ರದೇಶದ ಭೋಪಾಲ್, ಆಂಧ್ರ ಪ್ರದೇಶ ತಿರುಪತಿ 7 ನೇ ಸ್ಥಾನ ಪಡೆದುಕೊಂಡಿದ್ದರೆ, ಕರ್ನಾಟಕದ ಏಕೈಕ ನಗರ ಟಾಪ್ 10ರ ಒಳಗೆ ಸ್ಥಾನ ಪಡೆದಿದೆ. ಅದು ಮೈಸೂರು. ಭಾರತದ ಸ್ವಚ್ಚ ನಗರಗಳ ಪೈಕಿ ಮೈಸೂರು 8ನೇ ಸ್ಥಾನದಲ್ಲಿದೆ.
ನವ ದೆಹಲಿ 9ನೇ ಸ್ಥಾನದಲ್ಲಿದ್ದು ,ಚತ್ತೀಸಘಡದ ಅಂಬಿಕಾಪುರ ಕೊನೆಯ ಸ್ಥಾನದಲ್ಲಿದೆ.