ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೊದಲ ಸಲಿಂಗಕಾಮಿ ವಿವಾಹ ನಡೆದಿದ್ದು, ಗುಜರಾತ್‌ನ ರಾಜ್‌ಪಿಪ್ಲಾದ ಸಲಿಂಗಕಾಮಿ ಪ್ರಿನ್ಸ್ ಮಾನವೇಂದ್ರ ಸಿಂಗ್ ಗೋಹಿಲ್ ಅವರು ಓಹಿಯೋದ ಕೊಲಂಬಸ್‌ನಲ್ಲಿರುವ ಚರ್ಚ್‌ನಲ್ಲಿ ಡಿ ಆಂಡ್ರೆ ರಿಚರ್ಡ್‌ಸನ್ ಅವರನ್ನು ವಿವಾಹವಾಗಿದ್ದಾರೆ.
ಈ ಕುರಿತುಫೇಸ್‌ಬುಕ್‌ನಲ್ಲಿ ಡಿ ಆಂಡ್ರೆ ರಿಚರ್ಡ್‌ಸನ್ ಮಾಹಿತಿ ನೀಡಿದ್ದು, ಪ್ರಿನ್ಸ್ ಮಾನವೇಂದ್ರ ಸಿಂಗ್ ಮತ್ತು ಡಿ ಆಂಡ್ರೆ ರಿಚರ್ಡ್ಸನ್ ಅವರು ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಮತ್ತು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರೂ ತಮ್ಮ ಮದುವೆಯ ಬಗ್ಗೆ ಈಗಾಗಲೇ ಅನೇಕ ಬಾರಿ ಪರಸ್ಪರ ಮಾತನಾಡಿದ್ದರಂತೆ. ಆದರೆ, ಮದುವೆಯಾಗುವ ಬಗ್ಗೆ ಸಾರ್ವಜನಿಕವಾಗಿ ಮಾತ್ರ ಎಂದೂ ಮಾತನಾಡಿಲ್ಲ.ಇದೀಗ ಡಿ ಆಂಡ್ರೆ ರಿಚರ್ಡ್ಸನ್ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡುತ್ತಿದ್ದಾರೆ. ಈಗ ಕಾಣಿಸಿಕೊಂಡಿರುವ ಫೋಟೊ ಮತ್ತು ಮದುವೆ ನೋಂದಣಿ ಪ್ರಮಾಣಪತ್ರವು ಅವರ ಮದುವೆಯಾಗಿದ್ದಕ್ಕೆ ಪುರಾವೆಯಾಗಿದೆ.
ಗುಜರಾತ್‌ನ ರಾಜ್‌ಪಿಪ್ಲಾದ ಸಲಿಂಗಕಾಮಿ ಪ್ರಿನ್ಸ್ ಮಾನವೇಂದ್ರ ಸಿಂಗ್ ಗೋಹಿಲ್ ಬಹುಶಃ ತಾವು ಸಲಿಂಗಕಾಮಿ ಎಂಬುದನ್ನು ಒಪ್ಪಿಕೊಂಡ ದೇಶದ ಮೊದಲ ಪ್ರಿನ್ಸ್ ಅಥವಾ ರಾಜಕುಮಾರನಾಗಿದ್ದಾರೆ. ಅವರು ಬಹಿರಂಗವಾಗಿ ಒಪ್ಪಿಕೊಂಡ ಸಮಯದಿಂದ ಅವರು ಗುಜರಾತ್ನಲ್ಲಿ ಮಾತ್ರವಲ್ಲದೇ ಈಗ ದೇಶ ವಿದೇಶಗಳಲ್ಲೂ ಮಾನವೇಂದ್ರ ‘ಗೇ’ ಪ್ರಿನ್ಸ್ ಎಂದು ಗುರುತಿಸಿಕೊಂಡಿದ್ದಾರೆ.
ಸಲಿಂಗಕಾಮಿಗಳ ಅನುಕೂಲಕ್ಕಾಗಿ ಗೇ ಪ್ರಿನ್ಸ್ ಹಲವಾರು ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಅವರು ರಾಜ್‌ಪಿಪ್ಲಾದಲ್ಲಿ ಸಲಿಂಗಕಾಮಿಗಳಿಗಾಗಿ ವೃದ್ಧಾಶ್ರಮವನ್ನು ಸಹ ಸ್ಥಾಪಿಸಿದ್ದಾರೆ. ಈ ಆಶ್ರಮಕ್ಕೆ ಅಮೆರಿಕದ ಲೇಖಕಿ ‘ಜಾನೆಟ್’ ಅವರ ಹೆಸರಿಡಲಾಗಿದೆ. ಇದು ಭಾರತ ಮಾತ್ರವಲ್ಲದೇ ಇಡೀ ಏಷ್ಯಾದಲ್ಲೇ ಮೊದಲ ‘ಗೇ’ ಆಶ್ರಮವಾಗಿದೆ.