ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಕಡೆ ಹೊರಟಿದ್ದರೆ ಮಿಸ್ ಮಾಡದೇ ಅದ್ಭುತ ಸಂಗೀತ ಅನುಭವವನ್ನು ಪಡೆದುಕೊಂಡು ಬನ್ನಿ, ಇದ್ದಕ್ಕಿದ್ದಂತೆಯೇ ನಿಮ್ಮ ಕಾರ್‌ನಲ್ಲಿ ದೇಶ ಭಕ್ತಿ ಸೂಚಿಸುವಂತಹ ಹಾಡೊಂದು ಪ್ಲೇ ಆದರೆ ಹೇಗಿರುತ್ತದೆ?
ಮುಂಬೈನಲ್ಲಿ ಮೊದಲ ಮ್ಯೂಸಿಕಲ್ ರೋಡ್ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ವಾಹನ ಹೋದರೆ ಜೈ ಹೋ ಹಾಡು ಕೇಳಿಸುತ್ತದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂಬೈ ಕರಾವಳಿ ರಸ್ತೆಯಲ್ಲಿ ಇದನ್ನು ನಿರ್ಮಿಸಲಾಗಿದೆ.
ವಾಹನಗಳು ನಿಗದಿತ ವೇಗದಲ್ಲಿ ಚಲಿಸುವಾಗ ಮಾತ್ರ ಈ ಹಾಡನ್ನು ಕೇಳಬಹುದಾಗಿದೆ. ನಾರಿಮನ್ ಪಾಯಿಂಟ್‌ನಿಂದ ವರ್ಲಿಗೆ ಹೋಗುವ ಲೇನ್‌ನಲ್ಲಿ ಬಿಎಂಸಿ ಈ ವಿಶೇಷ ರಸ್ತೆಯನ್ನು ನಿರ್ಮಿಸಿದೆ.ಈ ರಸ್ತೆಗೆ ಧೈರ್ಯಶಾಲಿ ಮತ್ತು ಸ್ವಾಭಿಮಾನಿ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಹೆಸರನ್ನು ಇಡಲಾಗಿದೆ.
ಇದು ವಿಶ್ವದ ಐದನೇ ಮ್ಯೂಸಿಕಲ್ ರಸ್ತೆ ಮತ್ತು ಭಾರತದಲ್ಲಿ ಮೊದಲನೆಯದು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಹೇಳಿದೆ. ಇದು ವರ್ಲಿ ಸುರಂಗದಿಂದ ಹೊರ ಬಂದ ಬಳಿಕ ಸುಮಾರು 500 ಮೀಟರ್ ಮುಂದೆ, ಮೊದಲ ಲೇನ್‌ನಲ್ಲಿ ಸ್ಥಾಪಿಸಲಾಗಿದೆ.
ವೆಹಿಕಲ್ಸ್ ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಚಲಿಸಿದಾಗ ಟೈರ್ ಹಾಗೂ ರಸ್ತೆಯ ನಡುವಿನ ಘರ್ಷಣೆಯಿಂದ ಶಬ್ದ ಹೊರಬರುತ್ತದೆ. ಮ್ಯೂಸಿಕಲ್ ರಸ್ತೆ ಬರುವ ಸ್ವಲ್ಪ ಸಮಯದ ಮುನ್ನವೇ ಫಲಕಗಳನ್ನು ಹಾಕಲಾಗಿದೆ.
ನೀವು ಈಕಡೆ ಹೋದಾಗ ಮಿಸ್ ಮಾಡದೇ ಹಾಡನ್ನು ಕೇಳಿ ಬನ್ನಿ.. ಆಯ್ತಾ?



