ಹೊಸದಿಗಂತ ಡಿಜಿಟಲ್ ಡೆಸ್ಕ್ :
ಭಾರತದ ಪ್ರಸಿದ್ಧ ಕ್ರಿಕೆಟಿಗ ಸಲೀಂ ದುರಾನಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಕಾಬೂಲ್ ಮೂಲದ ದುರಾನಿ ಆಲ್‌ರೌಂಡರ್ ಆಗಿ ಪ್ರಸಿದ್ಧಿಗೊಂಡಿದ್ದರು. 29 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಅವರು 1961-62ರ ಐತಿಹಾಸಿಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು 2.0 ಅಂತರದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
1973ರ ʼಚರಿತ್ರಾʼ ಚಿತ್ರದಲ್ಲಿ ಪ್ರಸಿದ್ಧ ನಟ ಪ್ರವೀಣ್ ಬಾಬಿ ಜೊತೆ ನಟಿಸಿದ್ದ ಸ್ಟಾರ್ ಕ್ರಿಕೆಟಿಗ ಬಾಲಿವುಡ್‌ನಲ್ಲೂ ಕಾಣಿಸಿಕೊಂಡಿದ್ದರು.
ದುರಾನಿ ತಮ್ಮ ಕಿರಿಯ ಸಹೋದರ ಜಹಾಂಗೀರ್ ದುರಾನಿಯೊಂದಿಗೆ ಗುಜರಾತ್‌ನ ಜಾಮ್‌ನಗರದಲ್ಲಿ ವಾಸಿಸುತ್ತಿದ್ದರು. ಆರೋಗ್ಯದ ಸಮಸ್ಯೆಯಿಂದಾಗಿ ಇಂದು ಮೃತಪಟ್ಟಿದ್ದಾರೆ.