Friday, January 9, 2026

CINE | ಆಸ್ಕರ್ ಶಾರ್ಟ್​​​ಲಿಸ್ಟ್​​ನಲ್ಲಿ ಭಾರತದ ‘ಹೋಮ್​​ಬೌಂಡ್’​​, ಫೈನಲ್​​ ನಾಮಿನೇಷನ್‌ ಲಿಸ್ಟ್‌ ಅಷ್ಟೇ ಬಾಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ‘ಹೋಮ್‌ಬೌಂಡ್’ ಮುಂದಿನ ಸುತ್ತಿನ ಮತದಾನಕ್ಕೆ ಮುನ್ನಡೆಯುವುದರೊಂದಿಗೆ ಭಾರತದ ಕೀರ್ತಿ ಹೆಚ್ಚಿಸಿದೆ.

ಹೌದು, ಆಸ್ಕರ್​​ ಸ್ಪರ್ಧೆಯ ಶಾರ್ಟ್​​ಲಿಸ್ಟ್​​ನಲ್ಲಿ ಭಾರತದ ‘ಹೋಮ್​​ಬೌಂಡ್’​​ ಇದ್ದು, ಫೈನಲ್​ ನಾಮಿನೇಷನ್ಸ್​ ಲಿಸ್ಟ್​​ ಶೀಘ್ರದಲ್ಲೇ ಘೋಷಣೆಯಾಗಲಿದೆ.

ಇಂಟರ್​ನ್ಯಾಷನಲ್​​ ಫೀಚರ್​ ಫಿಲ್ಮ್​​ ಕ್ಯಾಟಗರಿಯಲ್ಲಿ, ಪ್ರಪಂಚದಾದ್ಯಂತದ 15 ಸಿನಿಮಾಗಳು ಮುಂದಿನ ಸುತ್ತಿನ ಮತದಾನಕ್ಕೆ ಆಯ್ಕೆಯಾಗಿವೆ ಎಂದು ಅಕಾಡೆಮಿ ಮಾಹಿತಿ ನೀಡಿದೆ. ಈ ಲಿಸ್ಟ್​ನಲ್ಲಿ, ಭಾರತದ ‘ಹೋಮ್‌ಬೌಂಡ್’ ಚಿತ್ರವು ಅರ್ಜೆಂಟೀನಾ, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಜೋರ್ಡಾನ್, ನಾರ್ವೆ, ಪ್ಯಾಲೆಸ್ಟೈನ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವಿಟ್ಜರ್ಲೆಂಡ್, ತೈವಾನ್ ಮತ್ತು ಟುನೀಶಿಯಾದ ಚಿತ್ರಗಳ ಜೊತೆಗೆ ಕಾಣಿಸಿಕೊಂಡಿದೆ.

ಅಕಾಡೆಮಿಯ ಅಧಿಕೃತ ಸೋಷಿಯಲ್​ ಮೀಟಿಯಾದಲ್ಲಿ, ಇಂಟರ್​ನ್ಯಾಷನಲ್​ ಫೀಚರ್​ ಫಿಲ್ಮ್​ ಕ್ಯಾಟಗರಿಯಲ್ಲಿ 15 ಚಿತ್ರಗಳು ಮುಂದಿನ ಸುತ್ತಿನ ಮತದಾನಕ್ಕೆ ಮುನ್ನಡೆದಿವೆ ಎಂದು ತಿಳಿಸಲಾಗಿದೆ. ಅಕಾಡೆಮಿ ಪ್ರಶಸ್ತಿಗಳ ಅಂತಿಮ ನಾಮನಿರ್ದೇಶಗಳು ಜನವರಿ 22, ಗುರುವಾರ ಪ್ರಕಟಗೊಳ್ಳಲಿದೆ.

error: Content is protected !!