ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಉಗ್ರರ ದಾಳಿ ಬಳಿಕ ಗಡಿಯಲ್ಲಿ ಯುದ್ಧದ ಭೀತಿ ಎದುರಾಗಿದೆ.ಇದರ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೊಂಕು ಮಾತನಾಡಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿ ಕುರಿತಂತೆ ಮಾತನಾಡಿದ ಶಾಹಿದ್ ಅಫ್ರಿದಿ, ಭಾರತವೇ ತನ್ನ ದೇಶದ ನಾಗರಿಕರನ್ನು ಹತ್ಯೆಗೈದು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ ಎಂದು ಗೂಬೆ ಕೂರಿಸಿದ್ದಾರೆ.
ಭಾರತ ಮಾಡಿದ ತಪ್ಪುಗಳಿಂದಲೇ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಆದರೆ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತದೆ. ಭಾರತವೇ ಭಾರತೀಯರನ್ನು ಕೊಲ್ಲುವಂತೆ ಮಾಡಿಕೊಂಡಿದೆ. ಇಸ್ಲಾಂ ಧರ್ಮ ನಮಗೆ ಶಾಂತಿಯನ್ನು ಮಾತ್ರ ಬೋಧಿಸುತ್ತದೆ. ಪಾಕಿಸ್ತಾನ ಎಂದಿಗೂ ಇಂತಹ ಭಯೋತ್ಪಾದನಾ ದಾಳಿಗೆ ಬೆಂಬಲ ನೀಡುವುದಿಲ್ಲ. ಭಾರತೀಯರು ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ನಾವು ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಲು ಸದಾ ಪ್ರಯತ್ನ ಪಡುತ್ತೇವೆ ಎಂದಿದ್ದಾರೆ.
ಇದೀಗ ಶಾಹಿದ್ ಅಫ್ರಿದಿ ಮಾತುಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.