ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನನ್ನು ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ.
ಪಾಕಿಸ್ತಾನದ ಉತ್ತರ ವಜೀರಿಸ್ತಾನ್‌ನಲ್ಲಿ ಭಯೋತ್ಪಾದಕ ದಾವೂದ್ ಮಲಿಕ್‌ನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ದಾವೂದ್ ಮಲಿಕ್, ಲಷ್ಕರ್-ಎ-ಜಬ್ಬಾರ್ ಸಂಸ್ಥಾಪಕ ಮತ್ತು ಭಾರತದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಮೌಲಾನಾ ಮಸೂದ್ ಅಜರ್‌ನ ನಿಕಟ ಸಹಾಯಕನಾಗಿದ್ದನು.
ಮಲಿಕ್ ಖಾಸಗಿ ಕ್ಲಿನಿಕ್‌ನಲ್ಲಿದ್ದಾಗ ದಾಳಿ ನಡೆದಿದ್ದು, ಅಪರಿಚಿತ ದುಷ್ಕರ್ಮಿಗಳು ಆತನನ್ನು ಹೊಂಚು ಹಾಕಿ ಗುಂಡಿಟ್ಟು ಕೊಂದು ಸ್ಥಳದಿಂದ ಪರಾರಿಯಾಗಿದ್ದಾರೆ.