ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸ್ತುತ ಬಾಂಗ್ಲಾದೇಶವನ್ನು ಮುನ್ನಡೆಸುತ್ತಿರುವ ಹಂಗಾಮಿ ಪ್ರಧಾನಿಯಾದ ಮೊಹಮ್ಮದ್ ಯೂನಸ್ ಚೀನಾ ಭೇಟಿಯ ಸಂದರ್ಭದಲ್ಲಿ ಭಾರತದ ಈಶಾನ್ಯ ರಾಜ್ಯಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯೂನಸ್ ಹೇಳಿಕೆ ಬಾಂಗ್ಲಾದೇಶ ಹಾಗೂ ಭಾರತದ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದ್ದು, ಚೀನಾದ ಪ್ರಾದೇಶಿಕ ಆಸಕ್ತಿಗಳನ್ನು ಹೆಚ್ಚಿಸುವ ಸಾಧ್ಯತೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಮೊಹಮ್ಮದ್ ಯೂನಸ್ ಚೀನಾ ಭೇಟಿಯ ಸಂದರ್ಭದಲ್ಲಿ, ಭಾರತದ ಈಶಾನ್ಯದ ಏಳು ರಾಜ್ಯಗಳು (ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಗಳನ್ನು ಉಲ್ಲೇಖಿಸಿ,) ಸಂಪೂರ್ಣವಾಗಿ ನೆಲಾವೃತ್ತವಾಗಿದ್ದು, ಅವುಗಳಿಗೆ ಸಮುದ್ರಕ್ಕೆ ನೇರ ಮಾರ್ಗವಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಈ ಪ್ರದೇಶಕ್ಕೆ ಬಾಂಗ್ಲಾದೇಶವೇ ಸಮುದ್ರದ ಸಂರಕ್ಷಕನಾಗಿದ್ದು, ಚೀನಾಕ್ಕೆ ಈ ಪ್ರದೇಶವನ್ನು ತನ್ನ ವಿಸ್ತರಣೆಯ ಭಾಗವಾಗಿ ಪರಿಗಣಿಸ ಬೇಕೆಂದು ಸಲಹೆ ನೀಡಿದ್ದಾರೆ.