ಭಾರತದ ಶ್ರೀಮಂತ ಸಂಸ್ಕೃತಿ ಇಂದಿಗೂ ಜೀವಂತ: ಮಂಗೇಶ್ ಭೇಂಡೆ

ಹೊಸದಿಗಂತ ವರದಿ,ಕಲಬುರಗಿ:

ವಿಶ್ವದ 37 ರಾಷ್ಟ್ರಗಳ ಸಂಸ್ಕೃತಿ, ಪರಂಪರೆ ನಶಿಸಿ ಹೋದರು,ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಇಂದಿಗೂ ಸಹ ಜೀವಂತವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಶ್ರೀಯುತ ಮಂಗೇಶ್ ಭೇಂಡೆ ಹೇಳಿದರು.

ಬುಧವಾರ ಕೇಶವ ಸೇವಾ ಸಮಿತಿ ಕಲಬುರಗಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಭಾಂಗಣದಲ್ಲಿ ನಡೆದ ಹೈದ್ರಾಬಾದ್ ಮುಕ್ತಿ ಸಂಘಷ೯ ಅಮೃತ ಮಹೋತ್ಸವ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾಯ೯ಕ್ರಮದ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.

ನಮ್ಮ ಪೂವ೯ಜರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅಸ್ಥಿತ್ವಕ್ಕಾಗಿ ನಿರಂತರವಾಗಿ ಹೋರಾಟ ಮಾಡಿ,ಇಂದಿಗೂ ಸಹ ಜೀವಂತವಾಗಿ ಇಟ್ಟಿ ಹೋಗಿದ್ದು,ಆ ಸಂಸ್ಕೃತಿ ಮತ್ತು ಪರಂಪರೆಯನ್ನು ನಾವು ನೀವು ಉಳಿಸಿಕೊಂಡು ಹೋಗಬೇಕಾಗಿದೆ.ಗ್ರೀಕ್, ರೋಮನ್ ಸೇರಿದಂತೆ ಅನೇಕ ದೇಶಗಳ ಸಂಸ್ಕೃತಿಯ ಕುರುಹುಗಳು ಹುಡುಕಾಡಿದರೂ,ಪತ್ತೆಯಾಗುವುದಿಲ್ಲ.ಕೇವಲ ಇಸ್ರೇಲ್ ದೇಶದ ಸಂಸ್ಕೃತಿ ಮಾತ್ರ ಇಂದಿಗೂ ಜೀವಂತವಾಗಿ ಉಳಿದಿದ್ದು,ಹೀಗಾಗಿ ಬಲಾಢ್ಯ ರಾಷ್ಟ್ರವಾಗಿ ಉಳಿದುಕೊಂಡಿದೆ ಎಂದರು.

ಇತಿಹಾಸದಿಂದ ಮನುಷ್ಯ ಪಾಠ ಕಲಿಬೇಕು. ಇತಿಹಾಸ ಸ್ವಾಭಿಮಾನವನ್ನು ಕಲಿಸುತ್ತದೆ. ಇತಿಹಾಸ ಮರೆತಾಗ ಮಾತ್ರ ಮನುಷ್ಯ ಹೇಡಿಯಾಗುವುದು.ಹೀಗಾಗಿ ಇತಿಹಾಸದ ಪ್ರಜ್ಞೆಯನ್ನು ಮೂಡಿಸುವ ಇಂತಹ ವಿಚಾರ ಸಂಕಿರಣ ಕಾಯ೯ಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಶುಭ ಕೋರಿದ ಅವರು, ಕೇಶವ ಸೇವಾ ಸಮಿತಿಯ ನಾಲ್ಕು ತಿಂಗಳ ಪರಿಶ್ರಮದ ಫಲ ಇಂದು ಯಶಸ್ವಿಯಾಗಿ ಕಾಯ೯ಕ್ರಮ ನೆರವೆರಿದೆ ಎಂದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೋ ದಯಾನಂದ ಅಗಸರ್ ಆನಲೈನ ಮೂಲಕ ಭಾಷಣ ನೀಡಿದರು. ವೇದಿಕೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿದೇ೯ಶಕ ಬಸವರಾಜ ಗಾದಗೀಯವರು, ಕೇಶವ ಸೇವಾ ಸಮಿತಿ ಅಧ್ಯಕ್ಷ ಸುರೇಶ್ ಹೆರೂರ್ ಉಪಸ್ಥಿತರಿದ್ದರು.ಸಮಿತಿ ಕಾಯ೯ದಶಿ೯ ಮಹಾದೆವಯ್ಯಾ ಕರದಳ್ಳಿ ಧನ್ಯವಾದಗಳು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!