ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ನಲ್ಲಿ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಭಾರತದ ಗೆದ್ದು ಸಂಭ್ರಮಿಸಿದ್ದು, ದೇಶಾದ್ಯಂತ ಸಂಭ್ರಮಾಚರಣೆ ಮನೆ ಮಾಡಿದೆ.
ಇದರ ನಡುವೆ ಕೇರಳದ ಉದ್ಯಮಿಯೊಬ್ಬರು ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ 2,000 ರೂ. ಮೌಲ್ಯದ ಗಿಫ್ಟ್ ನೀಡಿದ್ದಾರೆ.
ಕೇರಳದ ಉದ್ಯಮಿ ನಿತಿನ್ ಬಾಬು ತಮ್ಮ ಎರಡು ಉಡುಪು ಅಂಗಡಿಗಳ 82 ಉದ್ಯೋಗಿಗಳಿಗೆ ತಲಾ 2,000 ರೂ.ಗಳನ್ನು ನೀಡಿದ್ದಾರೆ.
ಫೈನಲ್ನಲ್ಲಿ ಕೇರಳ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಈ ಖುಷಿಯಲ್ಲಿ ಸಿಬ್ಬಂದಿಗಳಿಗೆ ಖುಷಿಯಲ್ಲಿ ಬಹುಮಾನ ಸಿಕ್ಕಿದೆ.
ಬಾಬು ತನ್ನ ಸಂಭ್ರಮವನ್ನು ಉದ್ಯೋಗಿಗಳೊಂದಿಗೆ ಹಂಚಿಕೊಂಡಿರುವುದು ಇದೇ ಮೊದಲಲ್ಲ. ಸ್ಪರ್ಧೆಯ ಉದ್ದಕ್ಕೂ, ಅವರು ಸಿಬ್ಬಂದಿಗೆ ನಗದು ಬಹುಮಾನಗಳನ್ನು ವಿತರಿಸುವ ಮೂಲಕ ಸ್ಯಾಮ್ಸನ್ ಅವರ ಪ್ರದರ್ಶನಗಳನ್ನು ಗುರುತಿಸಿದ್ದರು.
ಸೂಪರ್ 8ನಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದಾಗ ಮತ್ತು ಸ್ಯಾಮ್ಸನ್ ಅಜೇಯ 97 ರನ್ ಗಳಿಸಿದಾಗ, ಬಾಬು ಪಂಪಾಡಿ ಪೊನ್ನಪ್ಪನ್ ಸಿಟಿಯಲ್ಲಿರುವ ತನ್ನ ಮುಖ್ಯ ಅಂಗಡಿಯಲ್ಲಿ 62 ಉದ್ಯೋಗಿಗಳಿಗೆ ತಲಾ 500 ರೂ.ಗಳನ್ನು ನೀಡಿದ್ದರು.



