ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದ ಇಂಡಿಗೋ ಸಂಸ್ಥೆ ಇದೀಗ ಸಹಜ ಸ್ಥಿತಿಯತ್ತ ಮರಳುವ ಸೂಚನೆ ನೀಡಿದೆ. ಡಿಸೆಂಬರ್ 13ರಂದು ಇಂಡಿಗೋದ 2,050ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಿವೆ. ಇದು ವಾರಪೂರ್ತಿ ಅಡಚಣೆಗಳ ನಂತರ ಸಾಮಾನ್ಯ ಸ್ಥಿತಿಗೆ ಮರಳುವ ಸೂಚನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ವಿಮಾನ ವ್ಯತ್ಯಯದಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡಿದ್ದರಿಂದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಸುಮಾರು 59 ಕೋಟಿ ರೂ. ದಂಡ ವಿಧಿಸಲಾಗಿದೆ.
ಕಳೆದ ಐದು ದಿನಗಳಿಂದ ಕಾರ್ಯಾಚರಣೆ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ಹೇಳುತ್ತಿರುವ ಇಂಡಿಗೋ ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ಕಡಿಮೆ ಮಾಡಲಾದ ಪುನರ್‌ನಿಗದಿತ ವೇಳಾಪಟ್ಟಿಯ ಪ್ರಕಾರ ಇಂದು 2,050ಕ್ಕಿಂತ ಹೆಚ್ಚು ವಿಮಾನಗಳನ್ನು ಹಾರಾಟ ನಡೆಸುತ್ತಿದೆ. ‘ʼನಮ್ಮ ಸಕಾಲಿಕ ನಿರ್ವಹಣೆ ಸಾಮಾನ್ಯವಾಗಿದೆʼ ಎಂದು ಇಂಡಿಗೋ ವಕ್ತಾರರು ಹೇಳಿದ್ದಾರೆ.
ಡಿಸೆಂಬರ್ 12ರಂದು ಇಂಡಿಗೋ ಸಂಸ್ಥೆಯ ಕಾರ್ಯಾಚರಣೆ ಸಾಮಾನ್ಯ ಸ್ಥಿತಿಗೆ ಮರಳಿದ್ದು, 2,050 ವಿಮಾನಗಳು ಹಾರಿದವು ಮತ್ತು ರದ್ದುಪಡಿಸಿದ ವಿಮಾನಗಳ ಸಂಖ್ಯೆಯೂ ಕಡಿಮೆ ಆಗಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯು ಬಹುತೇಕ ಪ್ರಯಾಣಿಕರಿಗೆ ಮರುಪಾವತಿಯನ್ನು ನೀಡಲಾಗಿದೆ ಮತ್ತು ಉಳಿದವರಿಗೆ ಶೀಘ್ರದಲ್ಲೇ ಖಾತೆಗೆ ಜಮೆಯಾಗಲಿವೆ ಎಂದು ಹೇಳಿದೆ. ವಿಮಾನಯಾನ ಸಂಸ್ಥೆಯು ತೀವ್ರವಾಗಿ ಬಾಧಿತರಾದ ಪ್ರಯಾಣಿಕರನ್ನು ಗುರುತಿಸಿ, ಅವರಿಗೆ ಪರಿಹಾರ ನೀಡಲು ಜನವರಿಯಲ್ಲಿ ಅವರನ್ನು ಸಂಪರ್ಕಿಸಲಾಗುವುದು ಎಂದು ತಿಳಿಸಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯು ಪರಿಹಾರದ ಮೊತ್ತವು 500 ಕೋಟಿ ರೂ.ಗೂ ಹೆಚ್ಚಾಗಬಹುದು ಎಂದು ಅಂದಾಜಿಸಿದೆ. ವಿಮಾನ ಹಾರಾಟದ ಸಮಯಕ್ಕೆ 24 ಗಂಟೆಗಳ ಒಳಗೆ ವಿಮಾನಗಳು ರದ್ದುಗೊಂಡ ಗ್ರಾಹಕರಿಗೆ ಮತ್ತು ಕೆಲವು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡ ಪ್ರಯಾಣಿಕರಿಗೆ ಈ ಮೊತ್ತವನ್ನು ನೀಡಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಇಂಡಿಗೋ ಸಂಸ್ಥೆ ಪರಿಹಾರದ ಮೊತ್ತವು 500 ಕೋಟಿ ರೂ.ಗಿಂತ ಹೆಚ್ಚು ಇರಲಿದೆ ಎಂದು ತಿಳಿಸಿದೆ. ಪ್ರಯಾಣಿಕರ ವಿಮಾನಗಳು 24 ಗಂಟೆ ಒಳಗೆ ರದ್ದಾಗಿದ್ದರೆ ಈ ಮೊತ್ತ ನೀಡಲಾಗುತ್ತದೆ.

