June 25, 2026
Thursday, June 25, 2026
spot_img

ಇಂದಿರಾ ಗಾಂಧಿ ಕಾಲದ ಎಮರ್ಜೆನ್ಸಿ 9ನೇ ತರಗತಿಗೆ ಪಠ್ಯ: ಪ್ರಜಾಪ್ರಭುತ್ವದ ಪಾಠಕ್ಕೆ ಒತ್ತು ಎಂದ ಎನ್‌ಸಿಇಆರ್‌ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:


ದೇಶವನ್ನೇ ಆತಂಕಕ್ಕೆ ತಳ್ಳಿದ್ದ 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಈಗ 9ನೇ ತರಗತಿ ವಿದ್ಯಾರ್ಥಿಗಳ ಪಠ್ಯದಲ್ಲಿ ಸ್ಥಾನ ಪಡೆದಿದೆ.


ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪರಿಷ್ಕೃತ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ ಬಾರಿಗೆ ಈ ವಿಷಯಕ್ಕೆ ಪ್ರತ್ಯೇಕ ಅಧ್ಯಾಯವನ್ನು ಸೇರಿಸಿದೆ.


ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಅಡಿಯಲ್ಲಿ ರೂಪಿಸಲಾದ ಪಠ್ಯಕ್ರಮದಲ್ಲಿ, 1975ರಿಂದ 1977ರವರೆಗೆ ಜಾರಿಯಲ್ಲಿದ್ದ 21 ತಿಂಗಳ ತುರ್ತು ಪರಿಸ್ಥಿತಿಯನ್ನು ‘ಪ್ರಜಾಪ್ರಭುತ್ವಕ್ಕೆ ಎದುರಾದ ಸವಾಲು’ ಎಂದು ವಿವರಿಸಲಾಗಿದೆ. ಅಧ್ಯಾಯದಲ್ಲಿ ತುರ್ತು ಪರಿಸ್ಥಿತಿ ಅವಧಿಯಲ್ಲಿ ನಾಗರಿಕರ ಮೂಲಭೂತ ಹಕ್ಕುಗಳ ಮೇಲಾದ ಪರಿಣಾಮ, ಮಾಧ್ಯಮಗಳ ಮೇಲಿನ ನಿಯಂತ್ರಣ, ವಿರೋಧ ಪಕ್ಷದ ನಾಯಕರ ಬಂಧನ, ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಸಂಘರ್ಷ ಹಾಗೂ ಅಧಿಕಾರ ದುರ್ಬಳಕೆಯಂತಹ ವಿಷಯಗಳನ್ನು ಒಳಗೊಂಡಿದೆ. ಇದುವರೆಗೆ ಈ ವಿಷಯ 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯದಲ್ಲಿ ಮಾತ್ರ ಇದ್ದರೂ, ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ಮಹತ್ವವನ್ನು ಚಿಕ್ಕ ವಯಸ್ಸಿನಲ್ಲೇ ಅರ್ಥಮಾಡಿಸುವ ಉದ್ದೇಶದಿಂದ 9ನೇ ತರಗತಿಗೆ ತರಲಾಗಿದೆ ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.


ಈ ನಿರ್ಧಾರವನ್ನು ಕೆಲವರು ಪ್ರಜಾಪ್ರಭುತ್ವದ ಇತಿಹಾಸ ತಿಳಿಸುವ ಉತ್ತಮ ಹೆಜ್ಜೆ ಎಂದು ಸ್ವಾಗತಿಸಿದ್ದರೆ, ಮತ್ತೊಂದೆಡೆ ಕೆಲವು ವಲಯಗಳಲ್ಲಿ ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !