ಇತ್ತೀಚೆಗೆ ಮನೆಯೊಳಗೆ ಸಸ್ಯಗಳನ್ನು ಬೆಳೆಯುವ ಅಭ್ಯಾಸ ಹೆಚ್ಚಾಗಿದೆ. ಇದರಿಂದ ಮನೆಯ ಸೌಂದರ್ಯ ಮಾತ್ರವಲ್ಲ, ಆರೋಗ್ಯಕ್ಕೂ ಹೆಚ್ಚಿನ ಲಾಭ ದೊರೆಯುತ್ತದೆ ಅನ್ನೋದು ಕೂಡ ಗೊತ್ತಾಗಿದೆ. ಕೆಲವೊಂದು ಸಸ್ಯಗಳು ಮನೆಯಲ್ಲಿ ಆಮ್ಲಜನಕ ವಾತಾವರಣ ನಿರ್ಮಿಸಿ, ಮನಸ್ಸಿಗೆ ಶಾಂತಿ ಕೊಡುತ್ತವೆ.
ತುಳಸಿ (Tulsi):
ತುಳಸಿಯನ್ನು ‘ವೈದಿಕ ಔಷಧ’ ಎಂದೇ ಗುರುತಿಸಲಾಗುತ್ತದೆ. ಇದು ಮನೆಗೆ ಶುದ್ಧವಾದ ಆಮ್ಲಜನಕವನ್ನು ಒದಗಿಸುವ ಜೊತೆಗೆ, ವಾತಾವರಣದಲ್ಲಿನ ಬ್ಯಾಕ್ಟೀರಿಯಾ, ವೈರಸ್ ಗಳನ್ನೂ ತಡೆಯುತ್ತದೆ. ಜೊತೆಗೆ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಗುಣವಿದೆ.
ಅಲೋವೆರಾ (Aloe Vera):
ಅಲೋವೆರಾ ಸಸ್ಯದ ಗಾಳಿ ಶುದ್ಧೀಕರಣ ಶಕ್ತಿ ತುಂಬಾ ಅದ್ಭುತವಾಗಿದೆ. ಇದರ ಎಲೆಯಿಂದ ಚರ್ಮದ ಆರೈಕೆ, ಜಲಾಂಶ ಸಮತೋಲನ, ಹೊಟ್ಟೆಯ ಸಮಸ್ಯೆಗಳಿಗೆ ಉಪಶಮನ ನೀಡುತ್ತದೆ. ಮನೆಯೊಳಗೆ ಧೂಳು ಕಡಿಮೆ ಮಾಡುತ್ತದೆ.
ಸ್ಪೈಡರ್ ಪ್ಲಾಂಟ್ (Spider Plant):
ಇದು ಅಲ್ಪ ಬೆಳಕು, ಕಡಿಮೆ ನೀರಿನಲ್ಲೂ ಬೆಳೆಯುವ ಸಹನಶೀಲ ಸಸ್ಯ. ಗೃಹೋಪಯೋಗಿ ವಸ್ತುಗಳಿಂದ ಉಂಟಾಗುವ ಕಾರ್ಬನ್ ಮೋನೋಆಕ್ಸೈಡ್, ಫಾರ್ಮಾಲ್ಡಿಹೈಡ್ ಮತ್ತು ಜೈವಿಕ ವಿಷಾಂಶಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧಗೊಳಿಸುತ್ತದೆ.
ಸ್ನೇಕ್ ಪ್ಲಾಂಟ್ (Snake Plant):
ಇದು ರಾತ್ರಿ ವೇಳೆಯಲ್ಲಿಯೂ ಆಮ್ಲಜನಕ ಬಿಡುಗಡೆ ಮಾಡುವ ಅಪರೂಪದ ಸಸ್ಯಗಳಲ್ಲಿ ಒಂದು. ಇದನ್ನು ಮಲಗುವ ಕೊಠಡಿಯಲ್ಲಿ ಇಟ್ಟರೆ ಉತ್ತಮ ನಿದ್ರೆ ಮತ್ತು ಮಿದುಳಿಗೆ ಶಾಂತಿ ದೊರೆಯುತ್ತದೆ. ಗಾಳಿಯಲ್ಲಿರುವ ವಿಷಾಂಶಗಳನ್ನು ತಗ್ಗಿಸುವುದು ಇದರ ಮತ್ತೊಂದು ವಿಶೇಷತೆ.
ಇಂತಹ ಸಸ್ಯಗಳನ್ನು ಮನೆಯೊಳಗೆ ಇರಿಸಿಕೊಳ್ಳುವುದು ಆರೋಗ್ಯ ಮತ್ತು ಮನಶ್ಶಾಂತಿಯ ದೃಷ್ಟಿಯಿಂದ ಬಹುಪಯುಕ್ತ. ಮೇಲಿನ ಸಸ್ಯಗಳನ್ನು ನೀವು ಸುಲಭವಾಗಿ ಮನೆ ಅಥವಾ ಅಫೀಸ್‌ನೊಳಗೆ ಬೆಳೆಸಬಹುದು.