November 7, 2026
Saturday, November 7, 2026
spot_img

ಒಂದೂ ಶಬ್ದವಿಲ್ಲದಂತೆ, ಸ್ವಲ್ಪವೂ ಅನುಮಾನ ಬಾರದಂತೆ ಏಳು ಮಂದಿಯನ್ನು ಕೊ*ಲೆ ಮಾಡಿದ್ದ ಇಂದುಶೇಖರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತನ್ನ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿರುವ ಆರೋಪ ಹೊತ್ತಿರುವ ಕ್ಯಾಬ್‌ ಡ್ರೈವರ್‌ ಇಂದುಶೇಖರ ಅಕ್ಕಪಕ್ಕದ ಮನೆಯವರಿಗೆ ಒಂದು ಅನುಮಾನವೂ ಬಾರದಂತೆ ಏಳು ಮಂದಿಯನ್ನು ಕೊಂದು ಮುಗಿಸಿದ್ದಾನೆ ಎಂದು ಹೇಳಲಾಗಿದೆ.

ನೆರೆಹೊರೆಯವರ ಬಳಿ ಪಾರ್ಕಿಂಗ್‌ ವಿಚಾರವಾಗಿ ಜಗಳವಾಡುತ್ತಿದ್ದ ಇಂದುಶೇಖರನ ಜೊತೆ ಯಾವ ಜನರೂ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಈತನ ಪತ್ನಿ ಸುನೀತಾ ಹಾಗೂ ಮಗಳು ಹರ್ಷಿಣಿ ಕೂಡ ಒರಟು ಸ್ವಭಾವದವರು ಎಂದು ಸ್ಥಳೀಯರು ಹೇಳಿದ್ದಾರೆ.

ಏಳು ಮಂದಿಯನ್ನು ಒಬ್ಬೊಬ್ಬರನ್ನಾಗಿ ಮನೆಗೆ ಕರೆಸುವುದು, ಒಂದೂ ಸದ್ದಾಗದಂತೆ ಕೊಲೆ ಮಾಡುವುದು, ಮೃತದೇಹಗಳನ್ನು ಪ್ಯಾಕ್‌ ಮಾಡಿ ಗಾಡಿಯಲ್ಲಿ ಹಾಕುವುದು, ಮಧ್ಯರಾತ್ರಿ ಓಡಾಟ ಮಾಡುವುದು. ಇಂತಹ ಯಾವ ಕೆಲಸಗಳು ನಮಗೆ ಕಾಣಿಸಿಲ್ಲ. ಸುದ್ದಿ ನೋಡಿದಾಗಲೇ ನಮಗೂ ಇಲ್ಲಿ ಕೊಲೆಯಾಗಿದೆ ಎಂದು ತಿಳಿದಿದ್ದು ಎಂದು ನೆರೆಹೊರೆಯವರು ಹೇಳಿದ್ದಾರೆ.

ರಾಜಾಜಿನಗರದ ಐದನೇ ಬ್ಲಾಕ್‌ನಲ್ಲಿರುವ ಕಮರ್ಷಿಯಲ್‌ ಬಿಲ್ಡಿಂಗ್‌ನ ಎರಡನೇ ಮಹಡಿಯಲ್ಲಿನ ಮನೆಯಲ್ಲಿ ಏಳು ಮಂದಿಯ ಹತ್ಯೆಯಾಗಿದೆ. ಮನೆಯ ಅಕ್ಕಪಕ್ಕ, ಕೆಳಗೆ ಹಾಗೂ ಮೇಲಿನ ಮನೆಯವರಿಗೆ ಯಾರಾದರೂ ಕೂಗುವ ಅಥವಾ ಅಸಹಜ ಚಟುವಟಿಕೆಗಳು ಕಾಣಿಸಿಯೇ ಇಲ್ಲ ಎಂದು ಹೇಳಿದ್ದಾರೆ. ಇಂತಹ ಕಟುಕರ ಮಧ್ಯ ಇಷ್ಟು ದಿನ ಬದುಕಿದ್ದು, ಅವರ ಕೆಟ್ಟ ಕಣ್ಣಿಗೆ ಕಾಣಿಸದೇ ನಮ್ಮ ಪ್ರಾಣ ಉಳಿಸಿಕೊಂಡಿರುವುದೇ ದೊಡ್ಡ ಸಾಹಸವಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

Must Read