ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿಲಾಬಾದ್ ಜಿಲ್ಲೆಯ ಇಚೋಡಾದಲ್ಲಿ ಡ್ರಗ್ ಇಂಜೆಕ್ಷನ್ ದಾಳಿ ಸಂಚಲನ ಮೂಡಿಸಿದೆ. ಐಚೋಡ ಮಂಡಲದ ಹರಿನಾಯಕ ತಾಂಡಾದ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಮಾದಕ ದ್ರವ್ಯ ಚುಚ್ಚುಮದ್ದು ನೀಡಿ ಪರಾರಿಯಾಗಿದ್ದಾರೆ. ಚುಚ್ಚುಮದ್ದಿನ ಪರಿಣಾಮ ಯುವಕ ತೀವ್ರ ಅಸ್ವಸ್ಥಗೊಂಡು ರಸ್ತೆಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಯುವಕನನ್ನು ಆಂಬ್ಯುಲೆನ್ಸ್‌ನಲ್ಲಿ ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಯುವಕ ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದು, ರಿಮ್ಸ್ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು ಶ್ರೀಕಾಂತ್ ಎಂದು ಗುರುತಿಸಲಾಗಿದೆ. ಚುಚ್ಚುಮದ್ದಿನ ದಾಳಿ ನಡೆಸಿದವರು ಸ್ಥಳೀಯರಲ್ಲ, ಅವರನ್ನು ಅಲ್ಲಿ ನೋಡಿಲ್ಲ ಅಂತಿದಾರೆ ಸ್ಥಳೀಯರು.
ಈ ಚುಚ್ಚುಮದ್ದು ದಾಳಿಯ ವಿಷಯ ಬಾಯಿಗೆ ಬಂದಂತೆ ಹರಡುತ್ತಿರುವುದರಿಂದ ಸ್ಥಳೀಯರು ತೀವ್ರ ಭಯಭೀತರಾಗಿದ್ದಾರೆ. ದಾಳಿಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೈಕ್ ನಲ್ಲಿ ಬಂದು ಶ್ರೀಕಾಂತ್ ಮೇಲೆ ಹಲ್ಲೆ ಮಾಡಿದ್ದು ಯಾಕೆ? ಅವರು ಯಾರು?ಯಾಕೆ ದಾಳಿ ಮಾಡಿದರು? ಅಥವಾ ಹಳೆ ದ್ವೇಷಗಳಿವೆಯೇ? ಹಲವು ಕೋನಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.