ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ವರ್ಷದ ಹೆಣ್ಣು ಚೀತಾ ‘ನಭಾ’ ಶನಿವಾರ ಮೃತಪಟ್ಟಿದೆ. ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಈ ಚೀತಾ, ಕಳೆದ ವಾರ ಬೇಟೆಯಾಡುವ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿತ್ತು.
ಚಿಕಿತ್ಸೆಯಲ್ಲಿದ್ದ ನಭಾ, ಎಡ ಪಕ್ಕದ ಮೂಳೆ ಮುರಿತ ಹಾಗೂ ಇತರ ಗಾಯಗಳಿಂದ ಬಳಲುತ್ತಿದ್ದು, ಪ್ರಾಣಾಪಾಯದ ಪರಿಸ್ಥಿತಿಗೆ ತಲುಪಿದ್ದಳು. ನಿರಂತರ ವೈದ್ಯಕೀಯ ಪ್ರಯತ್ನದ ನಡುವೆಯೂ ಚೀತಾ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಭಾ ಚೀತಾದ ಸಾವಿನೊಂದಿಗೆ, ಕುನೋ ಉದ್ಯಾನದಲ್ಲಿ ಇರುವ ಚೀತಾಗಳ ಸಂಖ್ಯೆ ಈಗ 26ಕ್ಕೆ ಇಳಿದಿದೆ. ಇದರಲ್ಲಿ 9 ವಯಸ್ಕ ಚೀತಾಗಳಿದ್ದು, 6 ಹೆಣ್ಣುಗಳು ಮತ್ತು 3 ಗಂಡುಗಳು. ಇದರ ಜೊತೆಗೆ, ಕಾಂಚನ್ ಜುಂಗಾ ಉದ್ಯಾನದಲ್ಲಿ ಜನಿಸಿದ 17 ಮರಿಗಳು ಸೇರಿವೆ. ಇವುಗಳಲ್ಲಿ 26 ಚೀತಾಗಳಲ್ಲಿ 16 ಚೀತಾಗಳು ಕಾಡಿನಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.