ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ್ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷ ದಲಿತ ಕಾರ್ಡ್ ಪ್ಲೇ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ದಲಿತ ಸಿಎಂ ಕೂಗು ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಕೆಲವರು ದಲಿತ ಸಿಎಂ ಆಗಲಿ ಎಂದಿದ್ದು, ಅಲ್ಲಿಗೆ ಸಿಎಂ ಬದಲಾವಣೆ ಖಚಿತವಾಗಿದೆ. ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷ ದಲಿತ ಕಾರ್ಡ್ ಪ್ಲೇ ಮಾಡುತ್ತಿದೆ. ಆದರೆ ದಲಿತರಿಗೆ ಅನ್ಯಾಯ ಆದಾಗ ಸುಮ್ಮನಿರುತ್ತದೆ. ಇದುವರೆಗೆ ಪರಮೇಶ್ವರ್ ಹೆಸರಿತ್ತು. ಈಗ ಸತೀಶ್ ಜಾರಕಿಹೊಳಿಯವರ ಹೆಸರು ಮುನ್ನೆಲೆಗೆ ತಂದಿದ್ದಾರೆ.
ಅವರಿಬ್ಬರು ದಲಿತರೇ, ದಲಿತರ ನಡುವೆ ಕಚ್ಚಾಟ ತಂದು ತಮಾಷೆ ನೋಡುವ ಕೆಲಸ ಮಾಡುತ್ತಿರುವವರು ಯಾರು? ಅದಕ್ಕಾಗಿ ಕಾಂಗ್ರೆಸ್‌ನ್ನು ದಲಿತ ವಿರೋಧಿ ಎಂದು ಕರೆಯಲಾಗುತ್ತದೆ ಎಂದರು.