ಹೊಸದಿಗಂತ ಡಿಜಿಟಲ್ ಡೆಸ್ಕ್:
ಹವಾಮಾನ ಅಧ್ಯಯನ ಹಿನ್ನೆಲೆಯಲ್ಲಿ ಫೆ.17ರಂದು ಉಡ್ಡಯನ ಮಾಡಲಾಗಿರುವ ಇನ್ಸಾಟ್-3 ಡಿಎಸ್ ಉಪಗ್ರಹ ತನ್ನ ಡ್ಯೂಟಿ ಆರಂಭಿಸಿದೆ.
ಈ ಉಪಗ್ರಹದ ಆನ್-ಬೋರ್ಡ್ ಪೇಲೋಡ್‌ಗಳು ಸೆರೆಹಿಡಿದ ಮೊದಲ ಚಿತ್ರಗಳನ್ನು ಭೂಮಿಗೆ ರವಾನಿಸಿದ್ದು, ಹಾಸನದ ಕೇಂದ್ರದಲ್ಲಿ ಸಂಸ್ಕರಿಸಿ ಇವುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಇಸ್ರೋ ಹೇಳಿದೆ.
ಉಪಗ್ರಹದಲ್ಲಿರುವ 6-ಚಾನೆಲ್ ಇಮೇಜರ್ ಉಪಕರಣವು ಭೂಮಿಯ ಮೇಲ್ಮೈ, ವಾತಾವರಣದ ಚಿತ್ರಗಳನ್ನು ಸೆರೆಹಿಡಿಯಲಿದ್ದು, ಮೋಡಗಳು, ನೀರ್ಗಾಳಿ, ಭೂ ಮೇಲ್ಮೈ ತಾಪಮಾನದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಇದು ಸಹಕಾರಿಯಾಗಲಿದೆ.