ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ದಾಖಲೆ ಬರೆಯಲು ಭಾರತ ಸಜ್ಜಾಗುತ್ತಿದೆ.
ಇಸ್ರೋ ಸಾರಥ್ಯದಲ್ಲಿ ಹವಾಮಾನ ಮುನ್ಸೂಚನಾ ಉಪಗ್ರಹ ಇನ್‌ಸ್ಯಾಟ್-3ಡಿಎಸ್ ಇಂದು ಸಂಜೆ 5.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಡಾವಣೆಗೊಳ್ಳಲಿದ್ದು, 51.7 ಮೀಟರ್ ಎತ್ತರವಿರುವ ಜಿಎಸ್‌ಎಲ್‌ವಿ ರಾಕೆಟ್ ಈ ಉಪಗ್ರಹವನ್ನು ನಭಕ್ಕೆ ಹೊತ್ತೊಯ್ಯಲಿದೆ.
ಒಟ್ಟು 2,274 ಕೆ.ಜಿ ತೂಕವಿರುವ ಈ ಉಪಗ್ರಹದ ನಿರ್ಮಾಣಕ್ಕೆ 480 ಕೋಟಿ ರೂ. ವೆಚ್ಚ ತಗುಲಿದೆ. ಇದನ್ನು ಕೇಂದ್ರ ಭೂವಿಜ್ಞಾನ ಇಲಾಖೆ ಭರಿಸಿದೆ. ಈ ಉಪಗ್ರಹ, ಭೂಮಿಯ ಮೇಲ್ಪದರ, ಸಮುದ್ರಭಾಗಗಳ ಮೇಲೆ ನಿಗಾ, ಮಳೆ, ಪ್ರವಾಹಗಳು, ಭೂಕಂಪನಗಳ ಕುರಿತು ಉಪಗ್ರಹ ಮುನ್ಸೂಚನೆ ನೀಡಲಿದೆ.