ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾರ್ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯಾಗೋದಿಲ್ಲ ಅಂತ? ಸಾಮಾಜಿಕ ಜಾಲತಾಣಗಳನ್ನು ನಂಬಿ ಮೋಸ ಹೋದವರೂ ಉಂಟು ಹಾಗೇ ನಿಜವಾದ ಪ್ರೀತಿಯನ್ನು ಕಂಡುಕೊಂಡವರೂ ಉಂಟು.
ಜಾರ್ಖಂಡ್‌ನ ಪುಟ್ಟ ಗ್ರಾಮದ ಯುವಕ ಮೊಹಮ್ಮದ್ ಶದಾಬ್ ಹಾಗೂ ಪೋಲೆಂಡ್‌ನ ಪೋಲಾಕ್ ಬಾರ್ಬರಾ ಪ್ರೀತಿ ಕೂಡ ಇನ್ಸ್‌ಟಾಗ್ರಾಮ್‌ನಿಂದಲೇ ಆರಂಭವಾಗಿದ್ದು.
ಬಾರ್ಬರಾ ಹಾಗೂ ಶದಾಬ್ ಎರಡು ವರ್ಷದ ಹಿಂದೆ ಇನ್ಸ್‌ಟಾಗ್ರಾಮ್‌ನಲ್ಲಿ ಸ್ನೇಹಿತರಾಗಿದ್ದಾರೆ. ನಂತರ ಮಾತನಾಡುತ್ತಾ ಪ್ರೇಮವಾಗಿದ್ದು, ಇದೀಗ ಶಬಾದ್‌ನನ್ನು ಮದುವೆಯಾಗಲು ಬಾರ್ಬರಾ ಜಾರ್ಖಂಡ್‌ಗೆ ಬಂದಿದ್ದಾರೆ.
ಬಾರ್ಬರಾಗೆ 45 ವರ್ಷ, ಈಕೆಗೆ ಇದು ಎರಡನೇ ಮದುವೆ, ಇವರಿಗೆ 10 ವರ್ಷದ ಮಗಳಿದ್ದಾಳೆ. ಮಗಳನ್ನೂ ಕರೆದುಕೊಂಡು ಬಾರ್ಬರಾ ಜಾರ್ಖಂಡ್‌ಗೆ ಬಂದು ಇಳಿದಿದ್ದಾರೆ. ಜಾರ್ಖಂಡ್ ವಾತಾವರಣಕ್ಕೆ ಹೊಂದಿಕೊಳ್ಳಲು ಬಾರ್ಬರಾ ಪ್ರಯತ್ನ ಪಡುತ್ತಿದ್ದು,ಮನೆ ಕೆಲಸ ಮಾಡುತ್ತಾ ಅಪ್ಪಟ ಹಳ್ಳಿ ಹುಡುಗಿಯಂತೆ ನಡೆದುಕೊಳ್ತಿದ್ದಾರೆ.
ಆದರೆ ನಮ್ಮ ಹಳ್ಳಿಗೆ ಫಾರೀನರ್ ಬಂದಿದ್ದಾರೆ ಎಂದು ಜನ ಆಕೆಯನ್ನು ನೋಡಲು ಮುಗಿಬೀಳುತ್ತಿರೋದ್ರಿಂದ ಕೊಂಚ ಮುಜುಗರವಾಗಿದೆ ಎನ್ನುತ್ತಿದ್ದಾರೆ. ಶಬಾದ್ ಜೊತೆ ಮದುವೆ ಮಾಡಿಕೊಂಡು ಬಾರ್ಬರಾ ಅವರನ್ನೂ ಕರೆದುಕೊಂಡು ಪೋಲೆಂಡ್‌ಗೆ ತೆರಳಲಿದ್ದಾರೆ. ವೀಸಾ ಸಿಕ್ಕ ಕೂಡಲೇ ಮದುವೆಯಾಗಿ ತೆರಳುತ್ತೇವೆ ಎಂದು ಪ್ರೇಮಿಗಳು ಹೇಳ್ತಿದ್ದಾರೆ. ಒಟ್ಟಾರೆ ಎಲ್ಲವೂ ಶುಭವಾಗಲಿ ಎಂದು ಹಳ್ಳಿಗರು ಹಾರೈಸಿದ್ದಾರೆ.