ಬೆಂಗಳೂರಿನ ನಲ್ಲಿಗಳಿಗೆ ಇಂದಿನಿಂದ ಏರಿಯೇಟರ್‌ ಅಳವಡಿಕೆ, ಇದ್ರಿಂದ ಏನು ಲಾಭ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ದೊಡ್ಡ ಪ್ರಮಾಣದಲ್ಲಿ ನೀರನ್ನು ಬಳಕೆ ಮಾಡುವ ವಾಣಿಜ್ಯ ಸಂಸ್ಥೆಗಳು, ರೆಸ್ಟೋರೆಂಟ್‌ ಹಾಗೂ ಇನ್ನಿತರ ಪ್ರದೇಶದ ನಲ್ಲಿಗಳಿಗೆ ಏರಿಯೇಟರ್‌ ಅಳವಡಿಕೆ ಕಡ್ಡಾಯವಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇಂದಿನಿಂದ ಏರಿಯೇಟರ್‌ ಅಳವಡಿಕೆಗೆ ಮುಂದಾಗಿದೆ.

ಇದರಿಂದ ಏನು ಲಾಭ?
ಏರಿಯೇಟರ್‌ ಅಳವಡಿಕೆಯಿಂದ ನೀರನ್ನು ಸಂರಕ್ಷಿಸಬಹುದಾಗಿದೆ. ಈ ಸಾಧನವನ್ನು ನಲ್ಲಿಗೆ ಅಳವಡಿಸಿದ ನಂತರ ಇದು ನೀರಿನ ಹರಿವನ್ನು ನಿಯಂತ್ರಿಸುತ್ತದೆ. ನೀರಿನ ಹರಿವು ನಿಯಂತ್ರಣದ ಜೊತೆ ಬಳಕೆ ಕಡಿಮೆ ಮಾಡಬಹುದಾಗಿದೆ. ಒಟ್ಟಾರೆ ಶೇ. ೬೦-೮೫ರಷ್ಟು ನೀರನ್ನು ಉಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

2 COMMENTS

  1. ತಡವಾದರೂ ಒಳ್ಳೆಯ ನಿರ್ಣಯ.ಪರ್ಯಾವರಣ ಸಂರಕ್ಷಣ ಗತಿ ವಿಧಿಯಿಂದ ಕಳೆದ ನಾಲ್ಕು ವರ್ಷಗಳಿಂದಈ ಕುರಿತು ಅನುಷ್ಠಾನ ನಡೆದಿದೆ.ಮಹಾನಗರ ಪಾಲಿಕೆಗೂ ಗಮನಕ್ಕೆ .ತಂದಿದ್ದೆವು. ದುರ್ದೈವ ಆಸಕ್ತಿ ತೋರಿಸಲಿಲ್ಲ.ಕಡಿಮೆ ಪಕ್ಷ ಐದು ಸಾವಿರ ಮನೆ/ ಫ್ಲಾಟ್ ಗಳಲ್ಲಿ ಎರೇಟರ ಜೋಡಿಸಿದ್ದೇವೆ.ನೀರು ಉಳಿಸಿದ್ದೇವೆ ಎಂಬ ಧನ್ಯತೆ ಇದೆ.

  2. ಅಲ್ಲ ಸರ್ಕಾರ ಏರಿಯೆಟರ್ಸ್ ಕಾವೇರಿ ನದಿಗೆ ಅಳವಡಿಸುವ ಬದಲು ನೀರೇ ಬರದಿರೋ ನಲ್ಲಿಗೆ ಅಳವಡಿಸಿದ್ರೆ ಪ್ಲಬರ್ಗೆ ಲಾಭ ಅಷ್ಟೇ. ಬೇಕಾಬಿಟ್ಟಿ ತಮಿಳುನಾಡಿಗೆ ನೀರು ಹರಿಸಿ ಕುಡಿಯಲೂ ನೀರಿಲ್ಲದಂತೆ ಬೆಂಗಳೂರು ಜನರು ತಪಾತ್ರಯ ಪಡುತ್ತಾ ಒಂದು ಟ್ಯಾಂಕರ್ಗೆ ಸಾವಿರ ಎರಡು ಸಾವಿರ ಹಣ ಕೊಟ್ಟು ಖರೀದಿ ಮಾಡ್ತಾ ಇದ್ರೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ತಮಾಷೆ ಮಾಡ್ತಾ ಇದ್ದಾರಾ? ನಾಚಿಕೆ ಇಲ್ವಾ ಮನುಷ್ಯ ಜಾತಿಯೇ ಇವರು

LEAVE A REPLY

Please enter your comment!
Please enter your name here

error: Content is protected !!