ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಸರ್ಕಾರಕ್ಕೆ ಭಾರೀ ತಲೆನೋವಾಗಿರುವ ಅನ್ನಭಾಗ್ಯ ಯೋಜನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಕೂಡ ನೆರೆರಾಜ್ಯಗಳಿಗೆ ಕರೆ ಮಾಡಿ ಅಕ್ಕಿ ಲಭ್ಯತೆ ಬಗ್ಗೆ ಚರ್ಚೆ ಮಾಡಿದ್ದಾರೆ. ಕೆಲ ರಾಜ್ಯಗಳು ಇಲ್ಲ ಎಂದರೆ ಕೆಲ ರಾಜ್ಯಗಳಲ್ಲಿ ಅಕ್ಕಿ ದುಬಾರಿಯಾಗಿದೆ.
ಹೀಗಿರುವಾಗ ಅಕ್ಕಿ ಬದಲು ಜೋಳ ಹಾಗೂ ರಾಗಿಯನ್ನು ಪರ್ಯಾಯವಾಗಿ ನೀಡಬಹುದಲ್ಲ ಎನ್ನುವ ಪ್ರಶ್ನೆ ಎದುರಾಗಿದ್ದು, ಇದಕ್ಕೆ ಸಿಎಂ ಹೀಗಂದಿದ್ದಾರೆ.
ಪ್ರತೀ ಕುಟುಂಬಕ್ಕೆ ಎರಡು ಕೆ.ಜಿಯಷ್ಟು ರಾಗಿ ವಿತರಿಸಿದರೆ ಕೇವಲ ಆರು ತಿಂಗಳಲ್ಲಿ ದಾಸ್ತಾನಿನಲ್ಲಿ ಇರುವ ಎಲ್ಲ ರಾಗಿ ಖಾಲಿಯಾಗಲಿದೆ. ಜೋಳದ ದಾಸ್ತಾನು ಕೂಡ ಕಡಿಮೆ ಇದೆ. ಅಕ್ಕಿ ಹೊಂದಿಸುವ ಸರ್ಕಾರಿ ಏಜೆನ್ಸಿಗಳಾದ ಎನ್ಸಿಸಿಎಫ್ ಹಾಗೂ ಎನ್ಎಎಫ್ಇಡಿಗಳಿಂದ ಕೊಟೇಶನ್ ಕರೆದಿದ್ದೇವೆ, ನೋಡೋಣ ಎಂದು ಹೇಳಿದ್ದಾರೆ.