ಮೊಡವೆ ಸೌಂದರ್ಯಕ್ಕೆ ಶತ್ರು ಎಂದೇ ಎಷ್ಟೋ ಮಂದಿ ಭಾವಿಸಿದ್ದಾರೆ. ಮೊಡವೆ ನಮ್ಮ ಮುಖದ ಸೌಂದರ್ಯವನ್ನು ಮಂದ ಮಾಡುತ್ತದೆ, ಹಾಗಾಗಿ ಒಂದೇ ರಾತ್ರಿಯಲ್ಲಿ ಇದು ಹೋಗುವಂತೆ ಮಾಡಬೇಕು ಎಂದು ಅದಕ್ಕೆ ನಾನಾ ಪ್ರಯೋಗಗಳನ್ನು ಮಾಡಲಾಗುತ್ತದೆ. ಮೊಡವೆಗಳನ್ನು ನಯವಾಗಿ ಹೀಗೆ ನೋಡಿಕೊಳ್ಳಿ..
- ಮೊಡವೆಗಳಿಗೆ ಐಸ್ ಪ್ಯಾಕ್ ಹಾಕಿ, ಐಸ್‌ಕ್ಯೂಬ್‌ನಿಂದ ಮೊಡವೆಗಳನ್ನು ಉಜ್ಜಿ
- ಉಗುರಿನಿಂದ ಮೊಡವೆಗಳನ್ನು ಉಜ್ಜಿ ಬಿಳಿಯ ವಸ್ತುವನ್ನು ಕೀಳಬೇಡಿ, ಉಗುರು ತಾಗಿದ ಮೊಡವೆ ಕಲೆ ಜಾಸ್ತಿ ದಿನವೇ ಇರುತ್ತದೆ.
- ಕಲೆಗಳನ್ನು ಓಡಿಸುವ ಆಕ್ನಿ ಫೈಟಿಂಗ್ ಕ್ಲೆನ್ಸರ್‌ಗಳ ಬಳಕೆ ಮಾಡಬಹುದು
- ಮೊಡವೆ ಮುಟ್ಟಬಾರದು ಎಂದು ಏನೂ ಹಚ್ಚದೆ ಡ್ರೈ ಮಾಡಬೇಡಿ
- ಟೋನರ್ ಬಳಸಿ ಮೊಡವೆ ಕಾಣದಂತೆ ಮಾಡಿಕೊಳ್ಳಬಹುದು
- ಸಾಲಿಸಿಲಿಕ್ ಆಸಿಡ್ ಇರುವ ಉತ್ಪನ್ನಗಳನ್ನು ಮೊಡವೆ ಓಡಿಸಲು ಬಳಸಬಹುದು
- ನಿಮ್ಮ ದಿಂಬಿನ ಕವರ್ ಬದಲಾಯಿಸುವುದನ್ನು ಮರೆಯಬೇಡಿ
- ಜೆಲ್ ರೀತಿಯ ಲೈಟ್‌ವೇಟ್ ಮಾಯಿಶ್ಚರೈಸರ್ ಬಳಕೆ ಮಾಡಿ
- ಒತ್ತಡಗಳನ್ನು ಕಡಿಮೆ ಮಾಡಿ, ಹಾರ್ಮೋನ್ ವೇರಿಯೇಷನ್‌ಗಳಿಂದ ಮೊಡವೆಗಳ ಸಂಖ್ಯೆ ಹೆಚ್ಚು-ಕಡಿಮೆ ಆಗುತ್ತದೆ.