ಕನ್ನಡಿಗರಿಗೆ ಅಪಮಾನ: ಜಿಎಸ್‌ ಸೂಟ್ಸ್‌ ಹೋಟೆಲ್‌ ಸೀಜ್‌, ಮ್ಯಾನೇಜರ್‌ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಕೋರಮಂಗಲ ಜಿ.ಎಸ್​.ಸೂಟ್​ ಹೋಟೆಲ್​ನಲ್ಲಿ ಕನ್ನಡಿಗರನ್ನ‌ ನಿಂದಿಸುವ ಡಿಸ್​ಪ್ಲೇ ಬೋರ್ಡ್‌ ಹಾಕಿ ಅವಮಾನಿಸಿರುವಂತಹ ಘಟನೆ ನಡೆದಿತ್ತು.

ಇದು ಕನ್ನಡಿಗರನ್ನ ಮತ್ತೆ ಕೆರಳಿಸುವಂತೆ ಮಾಡಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮ್ಯಾನೇಜರ್ ಸರ್ಫಜ್​​ ಎಂಬಾತನನ್ನು ಬಂಧಿಸಲಾಗಿದ್ದು, ಕನ್ನಡಿಗರಿಗೆ ಅಪಮಾನ ಮಾಡಿದ್ದ ಜಿ.ಎಸ್​.ಸೂಟ್​ ಹೋಟೆಲ್​​ ಸೀಜ್ ಮಾಡಲಾಗಿದೆ. ಅಷ್ಟೇ ಅಲ್ಲದೆ ಹೋಟೆಲ್​​ ಮಾಲೀಕ ಜಮ್ಸದ್ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ.

ನಮ್ಮ‌ ನೆಲದ ಅನ್ನ ತಿಂದು ನಮ್ಮನ್ನೇ ಅವಮಾನಿಸುತ್ತಿದ್ದಾರೆ.‌ ಪದೆ-ಪದೇ ಕನ್ನಡಿಗರನ್ನ ಕೆರಳಿಸುತ್ತಿದ್ದಾರೆ.  ಕೋರಮಂಗಲದ‌‌ ನೆಕ್ಸಸ್ ಮಾಲ್ ಸಮೀಪದಲ್ಲಿ ಜಿ.ಎಸ್​.ಸೂಟ್​ ಹೋಟೆಲ್​ ಇದೆ. ಈ ಹೋಟೆಲ್​​ನ ಹೊರಭಾಗದ ಡಿಸ್​ಪ್ಲೇ ಬೋರ್ಡ್​ನಲ್ಲಿ ನಿನ್ನೆ ರಾತ್ರಿ ಅವಹೇಳನಕಾರಿ ಬರಹ ಪ್ರದರ್ಶಿಸಿದ್ದರು. ಅದನ್ನ ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಿದ್ದಾರೆ. ಬಳಿಕ ವಿಡಿಯೋ ನೋಡ್ತಿದ್ದಂತೆ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!