ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಜೀವ ವಿಮಾ ರಕ್ಷಣಾ ಅಂತರವು 2019 ರ 83% ಇಂದ 2023 ಕ್ಕೆ 87% ಗೆ ಗಮನಾರ್ಹವಾಗಿ ಏರಿಕೆಯಾಗಿದೆ ಎಂಬುದನ್ನು ಡಿಸೆಂಬರ್ 2023 ರ ನ್ಯಾಷನಲ್ ಇನ್ಸೂರೆನ್ಸ್ ಅಕಾಡೆಮಿ (NIA) ಅಧ್ಯಯನ(i) ತಿಳಿಸಿದೆ.
ವಿಶೇಷವಾಗಿ 18–35 ವರ್ಷದವರಲ್ಲಿ ಈ ಅಂತರ 90% ಕ್ಕಿಂತ ಹೆಚ್ಚಾಗಿದೆ. ಈ ಹೆಚ್ಚುತ್ತಿರುವ ಭದ್ರತಾ ಕೊರತೆಯು ಕುಟುಂಬಗಳ ಆರ್ಥಿಕ ಭದ್ರತೆ ಹಾಗೂ ಆಶಯಗಳಿಗೆ ಬಹುಮುಖ್ಯವಾದ ಸವಾಲಾಗಿ ಪರಿಣಮಿಸುತ್ತಿದೆ.
ಜನಸಾಮಾನ್ಯರಿಗೆ ತಲುಪುವ ಸವಾಲನ್ನು ಎದುರಿಸಲು, ಭಾರತದಲ್ಲಿನ ಎಲ್ಲಾ ಜೀವ ವಿಮಾ ಕಂಪನಿಗಳನ್ನು ಪ್ರತಿನಿಧಿಸುವ ‘ವಿಮಾ ಜಾಗೃತಿ ಸಮಿತಿ’ ತನ್ನ ರಾಷ್ಟ್ರೀಯ ಅಭಿಯಾನವಾದ ‘ಸಬ್‌ಸೆ ಪೆಹೆಲೆ ಲೈಫ್ ಇನ್ಸುರೆನ್ಸ್’ ನ ಮುಂದಿನ ಹಂತವನ್ನು ಆರಂಭಿಸಿದೆ. ಈ ಹಂತದ ಅಭಿಯಾನವು ಜೀವ ವಿಮೆಯನ್ನು ಪ್ರತಿಯೊಬ್ಬ ಭಾರತೀಯನೂ ಹೊಸ ಹುರುಪುಪಿನಿಂದ ತಮ್ಮ ಹಣಕಾಸು ವ್ಯವಹಾರಗಳ ಮೂಲಾಧಾರವಾಗಿ ಪರಿಗಣಿಸಬೇಕೆಂಬ ನಿಟ್ಟಿನಲ್ಲಿ ಪ್ರೇರಣೆ ನೀಡುತ್ತದೆ ಮತ್ತು ಹೆಚ್ಚುತ್ತಿರುವ ಜಾಗೃತಿಯನ್ನು ಅರ್ಥಪೂರ್ಣ ಕ್ರಿಯೆಯಾಗಲು ಪ್ರೋತ್ಸಾಹಿಸುತ್ತದೆ.
ಮೂಲಭೂತ ಹಣಕಾಸು ರಕ್ಷಣೆಯನ್ನು ನಿರ್ಲಕ್ಷಿಸುವಾಗ ಉಳಿತಾಯ ಮತ್ತು ಹೂಡಿಕೆಗಳಿಗೆ ಆದ್ಯತೆ ನೀಡುವ ಸಾಮಾನ್ಯ ಅಭ್ಯಾಸವನ್ನು ಈ ಅಭಿಯಾನವು ಪ್ರಶ್ನಿಸುತ್ತದೆ. ಜೀವ ವಿಮೆಯು ಯಾವುದೇ ಸುರಕ್ಷಿತ ಹಣಕಾಸು ಯೋಜನೆಯ ಆರಂಭಿಕ ಬಿಂದುವಾಗಿರಬೇಕು ಎಂದು ಇದು ಪುನರುಚ್ಚರಿಸುತ್ತದೆ. ಮಕ್ಕಳ ಶಿಕ್ಷಣ, ಮನೆ ಮಾಲೀಕತ್ವ ಮತ್ತು ನಿವೃತ್ತಿಯಂತಹ ದೀರ್ಘಕಾಲೀನ ಗುರಿಗಳಿಗೆ ಬಲವಾದ ಅಡಿಪಾಯವನ್ನು ಒದಗಿಸುತ್ತದೆ.
ಅಧಿಕೃತ ಕಥೆ ಹೇಳುವಿಕೆ ಮತ್ತು ಭಾವನಾತ್ಮಕವಾಗಿ ಪ್ರತಿಧ್ವನಿಸುವ ನಿರೂಪಣೆಗಳ ಮೂಲಕ, ಅಭಿಯಾನವು ನಿಜವಾಗಿಯೂ ಅಪಾಯದಲ್ಲಿದೆ ಎಂಬುದನ್ನು ಎತ್ತಿ ತೋರಿಸುವ ದೈನಂದಿನ ಕ್ಷಣಗಳಿಗೆ ಜೀವ ತುಂಬುತ್ತದೆ. ಈ ಅಭಿಯಾನವು ಜೀವ ವಿಮೆಯನ್ನು ಕೇವಲ ಒಪ್ಪಂದವಲ್ಲದೆ ಕನಸುಗಳನ್ನು ಸಂರಕ್ಷಿಸುವ, ಕುಟುಂಬಗಳಿಗೆ ಸಾಂತ್ವನ ನೀಡುವ, ಮತ್ತು ಮನಸ್ಸಿಗೆ ಶಾಂತಿಯನ್ನೂ ನೀಡುವ “ಜೀವನ ಸಾಧನ”ವೆಂದು ಪ್ರತಿಪಾದಿಸುತ್ತದೆ.
ಈ ಅಭಿಯಾನವನ್ನು ಗ್ರಾಹಕರಲ್ಲಿ ನಡವಳಿಕೆಯ ಬದಲಾವಣೆಯನ್ನು ತರಲು ಮತ್ತು ಜೀವ ವಿಮಾ ಪರಿಹಾರಗಳ ಬಗ್ಗೆ ಜಾಗೃತಿ ಹಾಗೂ ವ್ಯಾಪ್ತಿಯನ್ನು ಹೆಚ್ಚಿಸಲು ಒಂದು ವರ್ಷದ ಉಪಕ್ರಮವಾಗಿ ಯೋಜಿಸಲಾಗಿದೆ. ಈ ಅಭಿಯಾನವು ಹೆಚ್ಚು ಜನರಿಗೆ ತಲುಪಲು ಮತ್ತು ನೆನಪಿನಲ್ಲಿರುವಂತೆ ಮಾಡಲು ದೂರದರ್ಶನ, ಡಿಜಿಟಲ್ ಮಾಧ್ಯಮ, ಮುದ್ರಿತ ಮಾಧ್ಯಮ, ಹೊರಾಂಗಣ ಜಾಹೀರಾತುಗಳು ಸೇರಿದಂತೆ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ಜಾರಿಗೆ ತರಲಾಗುತ್ತದೆ.
ವಿಮಾ ಜಾಗೃತಿ ಸಮಿತಿಯ ಸದಸ್ಯರು ಹೀಗೆ ತಿಳಿಸಿದ್ದಾರೆ, “‘ಸಬ್‌ಸೆ ಪೆಹೆಲೆ ಲೈಫ್ ಇನ್ಸುರೆನ್ಸ್’ ಎಂಬುದು ಕೇವಲ ಘೋಷಣೆಯಲ್ಲ. ಇದು ಹಣಕಾಸು ಯೋಜನೆಯ ಬಗ್ಗೆ ನಮ್ಮ ದೃಷ್ಟಿಕೋನವನ್ನು ಮರುಪರಿಶೀಲಿಸುವ ಕರೆಯಾಗಿದೆ. ಸಂಪತ್ತನ್ನು ನಿರ್ಮಿಸಲು ಪ್ರಯತ್ನಿಸುವಾಗ ನಾವು ರಕ್ಷಣೆಯನ್ನು ಬಹುಮಟ್ಟಿಗೆ ಕಡೆಗಣಿಸುತ್ತೇವೆ. ಈ ಅಭಿಯಾನವು ಆ ಮನೋಭಾವವನ್ನು ಬದಲಾಯಿಸಲು ಮತ್ತು ಕನಸುಗಳನ್ನು ಬೆನ್ನಟ್ಟುವ ಮುನ್ನ ಅವುಗಳನ್ನು ರಕ್ಷಿಸಲು ಪ್ರೇರೇಪಿಸುತ್ತದೆ. ಪ್ರತಿ ಕಟ್ಟಡಕ್ಕೂ ಭದ್ರವಾದ ನೆಲೆಯ ಅಗತ್ಯವಿರುವಂತೆ, ಪ್ರತಿಯೊಬ್ಬರ ಆರ್ಥಿಕ ಯೋಜನೆಗೂ ಜೀವ ವಿಮೆಯು ಆ ನೆಲೆ ಆಗಬೇಕು. ನಮ್ಮ ಗುರಿ ಯಾವುದೇ ಭಾರತೀಯ ಕುಟುಂಬಗಳು ಆರ್ಥಿಕ ಅಸುರಕ್ಷತೆಯಿಂದ ಬಳಲದಂತೆ, ಜಾಗೃತಿಯನ್ನು ಕ್ರಿಯೆಯಾಗಿ ಪರಿವರ್ತಿಸುವುದೇ ಆಗಿದೆ.
ಈ ಅಭಿಯಾನವು ಜೀವ ವಿಮೆ ಇದ್ದರೆ ಒಳ್ಳೆಯದು ಎನ್ನುವ ಭಾವನೆಯಿಂದ ಆರ್ಥಿಕ ಯೋಜನೆಯ ಅಗತ್ಯವಾದ ಅಂಶವಾಗಿ ಪರಿವರ್ತಿಸಲು ಉದ್ದೇಶಿಸಿದೆ. ಈ ಹಂತದ ಭಾಗವಾಗಿ, ವಿಮಾ ಜಾಗೃತಿ ಸಮಿತಿಯು ಡಿಜಿಟಲ್ ಜ್ಞಾನ ಕೇಂದ್ರ https://www.sabsepehlelifeinsurance.com/ ಅನ್ನು ಉನ್ನತ ಮಟ್ಟಕ್ಕೇರಿಸಿದೆ, ಇದು ಅಭಿಯಾನದ ಪ್ರಮುಖ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಈ ಪೋರ್ಟಲ್ ಸರಳೀಕೃತ ಮತ್ತು ಮೌಲ್ಯಯುತ ಸಂಪನ್ಮೂಲಗಳನ್ನು ಒದಗಿಸುತ್ತದೆ, ಅದು ಜನರಿಗೆ ವ್ಯಾಪ್ತಿಯ ಅಗತ್ಯಗಳನ್ನು ನಿರ್ಣಯಿಸಲು ಮತ್ತು ಮಾಹಿತಿಯುಕ್ತ ಆಯ್ಕೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.
ಈ ಅಭಿಯಾನವು ರಕ್ಷಣಾ ಅಂತರವನ್ನು ಕಡಿಮೆಗೊಳಿಸುವ ವ್ಯಾಪಕ ಪ್ರಯತ್ನಗಳೊಂದಿಗೆ ಕೈಜೋಡಿಸುತ್ತದೆ. ಇದರಲ್ಲಿ IRDAI ಸಂಸ್ಥೆಯ 2024ರ ನಿರ್ದೇಶನವೂ ಸೇರಿದೆ—ಇದರ ಅನುಸಾರ, ಜೀವ ವಿಮಾ ಕಂಪನಿಗಳು ದೇಶದಾದ್ಯಂತ 25,000 ಗ್ರಾಮ ಪಂಚಾಯತ್‌ಗಳಲ್ಲಿ ಕನಿಷ್ಠ 10% ಜನರನ್ನು ವಿಮಾ ವ್ಯಾಪ್ತಿಯೊಳಗೆ ತರಬೇಕು(ii). ಭಾರತೀಯ ವಿಮಾ ಅಂಕಿಅಂಶಗಳ ಕೈಪಿಡಿ (2023–24) ಪ್ರಕಾರ, ಭಾರತದ ವಿಮಾ ಕಂಪನಿಗಳು FY 2023–24 ರಲ್ಲಿ ಒಟ್ಟಾರೆ 96.82% ಜೀವ ವಿಮಾ ಕ್ಲೈಮ್ ಗಳನ್ನು 30 ದಿನಗಳೊಳಗೆ ಪರಿಹರಿಸಿದ್ದಾರೆ ಎಂದು ಬಹಿರಂಗಪಡಿಸುತ್ತದೆ(iii). ಈ ಕ್ಷೇತ್ರವು ಪ್ರಸ್ತುತ 9.5% ಸಂಯುಕ್ತ ವಾರ್ಷಿಕ ಬೆಳವಣಿಗೆ ದರದೊಂದಿಗೆ (CAGR) ಬೆಳೆಯುತ್ತಿದ್ದು, ಮುಂದಿನ ದಶಕದಲ್ಲಿ ಇದು 10.5% ಕ್ಕೆ ತಲುಪುವ ನಿರೀಕ್ಷೆಯಿದೆ(v).
ಭಾರತ ತನ್ನ $5 ಟ್ರಿಲಿಯನ್ ಆರ್ಥಿಕತೆಯ ಗುರಿಯ ಕಡೆ ಮುನ್ನಡೆಯುತ್ತಿದ್ದಂತೆ, ಪ್ರತಿಯೊಬ್ಬ ಭಾರತೀಯನನ್ನು ತಮ್ಮ ಕುಟುಂಬದ ಭವಿಷ್ಯವನ್ನು ರಕ್ಷಿಸಲು ಜೀವ ವಿಮೆಯನ್ನು ಮೊದಲ ಹೆಜ್ಜೆಯಾಗಿ ಪ್ರೋತ್ಸಾಹಿಸಲು ವಿಮಾ ಜಾಗೃತಿ ಸಮಿತಿ ಬದ್ಧವಾಗಿದೆ.