February 3, 2026
Tuesday, February 3, 2026
spot_img

Interesting Facts |ನಮ್ಮ-ನಿಮ್ಮ ಫೇವರಿಟ್ ಫುಡ್ ಗಳು ವಿದೇಶದಲ್ಲಿ ಬ್ಯಾನ್‌ ಆಗಿವೆ ಅನ್ನೋದು ಗೊತ್ತಾ?

ಭಾರತೀಯ ಅಡುಗೆ ಅನ್ನೋದು ಕೇವಲ ಹೊಟ್ಟೆ ತುಂಬಿಸುವ ವಿಷಯ ಅಲ್ಲ, ಅದು ಸಂಸ್ಕೃತಿ, ಪರಂಪರೆ ಮತ್ತು ಭಾವನೆಗಳ ಸಂಗಮ. ಆದರೆ ನಮಗೆ ದಿನನಿತ್ಯ ಸಹಜವಾಗಿರುವ ಕೆಲ ಆಹಾರಗಳು, ಕೆಲವು ವಿದೇಶಗಳಲ್ಲಿ ಆಶ್ಚರ್ಯಕರವಾಗಿ ನಿಷೇಧಕ್ಕೆ ಒಳಪಟ್ಟಿವೆ. ಕಾರಣಗಳು ಆರೋಗ್ಯದಿಂದ ಹಿಡಿದು ಸ್ಥಳೀಯ ಸಂಸ್ಕೃತಿ ರಕ್ಷಣೆಯವರೆಗೂ ವಿಸ್ತಾರವಾಗಿದೆ.

ಸಮೋಸಾ
ಭಾರತೀಯ ತಿಂಡಿಯ ರಾಜನೆಂದೇ ಕರೆಸಿಕೊಳ್ಳುವ ಸಮೋಸಾ, ಸೋಮಾಲಿಯಾದಲ್ಲಿ ನಿಷೇಧ. ಅಲ್ಲಿನ ಆಡಳಿತದ ಪ್ರಕಾರ, ಸಮೋಸಾ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ವಿದೇಶಿ ಪ್ರಭಾವ ಹೆಚ್ಚಿಸುತ್ತದೆ ಎಂಬ ಕಾರಣಕ್ಕೆ ನಿರ್ಬಂಧ ಹೇರಲಾಗಿದೆ.

ತುಪ್ಪ (Ghee)
ಭಾರತೀಯ ಅಡುಗೆ ಮನೆಯ ಹೃದಯವೇ ತುಪ್ಪ. ಆದರೆ ಅಮೆರಿಕದಲ್ಲಿ ಇದು ಹೆಚ್ಚಿನ ಕೊಬ್ಬಿನ ಅಂಶ ಹೊಂದಿದೆ ಎಂಬ ಕಾರಣದಿಂದ, ಸ್ಥೂಲಕಾಯ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ಆತಂಕದಿಂದ ನಿರ್ಬಂಧಿಸಲಾಗಿದೆ.

ಚವನ್ ಪ್ರಾಶ್
ಆಯುರ್ವೇದದ ಅಮೂಲ್ಯ ಕೊಡುಗೆ ಚವನ್ ಪ್ರಾಶ್ ಕೆನಡಾದಲ್ಲಿ 2005ರಿಂದಲೇ ಬ್ಯಾನ್ ಆಗಿದೆ. ಇದರಲ್ಲಿ ಸೀಸದ ಅಂಶ ಹೆಚ್ಚು ಇರಬಹುದು ಎಂಬ ವರದಿಗಳೇ ಕಾರಣ ಎನ್ನಲಾಗಗಿದೆ.

ಇದನ್ನೂ ಓದಿ:

ಕಬಾಬ್
ವೆನಿಸ್ ನಗರದಲ್ಲಿ ಭಾರತೀಯ ಶೈಲಿಯ ಕಬಾಬ್‌ಗಳಿಗೆ ಅವಕಾಶ ಇಲ್ಲ. ನಗರದ ಐತಿಹಾಸಿಕ ಸೌಂದರ್ಯ ಮತ್ತು ಆಹಾರ ಪರಂಪರೆಯನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಗಸಗಸೆ (Poppy Seeds )
ಅನೇಕ ಭಾರತೀಯ ಪದಾರ್ಥಗಳಿಗೆ ಅಗತ್ಯವಾದ ಗಸಗಸೆ, ತೈವಾನ್ ಮತ್ತು ಸಿಂಗಪೂರ್‌ನಲ್ಲಿ ನಿಷೇಧಿತ. ಮಾದಕ ವಸ್ತುಗಳಿಗೆ ಸಂಬಂಧಿಸಿದ ಆತಂಕ ಇದಕ್ಕೆ ಪ್ರಮುಖ ಕಾರಣ.

ಟೊಮ್ಯಾಟೋ ಸಾಸ್ / ಕೆಚಪ್
ಭಾರತೀಯ ತಿಂಡಿಗಳಲ್ಲಿ ಬಳಸುವ ಕೆಚಪ್, ಫ್ರಾನ್ಸ್‌ನಲ್ಲಿ ಆಹಾರ ಸಂಸ್ಕೃತಿಗೆ ವಿರುದ್ಧ ಎಂದು ಪರಿಗಣಿಸಿ ಬಳಕೆಯನ್ನು ನಿರ್ಬಂಧಿಸಲಾಗಿದೆ.

ಜೆಲ್ಲಿ ಕಪ್‌ಗಳು
ಮಕ್ಕಳಿಗೆ ಇಷ್ಟವಾಗುವ ಜೆಲ್ಲಿ ಕಪ್‌ಗಳು, ಮಕ್ಕಳ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತವೆ ಎಂಬ ಕಾರಣಕ್ಕೆ ಕೆಲವು ದೇಶಗಳಲ್ಲಿ ನಿಷೇಧಕ್ಕೆ ಒಳಪಟ್ಟಿವೆ.

ಒಂದು ದೇಶದಲ್ಲಿ ರುಚಿ, ಇನ್ನೊಂದು ದೇಶದಲ್ಲಿ ಅಪಾಯ. ಆಹಾರವೆಂಬುದು ಕೇವಲ ಪದಾರ್ಥವಲ್ಲ, ಅದು ದೇಶದ ಕಾನೂನು, ಸಂಸ್ಕೃತಿ ಮತ್ತು ಆರೋಗ್ಯ ನೀತಿಗಳ ಪ್ರತಿಬಿಂಬವೂ ಹೌದು.(ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !