Interesting Facts: ಸಾವು ಹತ್ತಿರವಾಗುತ್ತಿದಂತೆ ಈ ಲಕ್ಷಣಗಳು ಗೋಚರಿಸುತ್ತಂತೆ! ಮೊದ್ಲೇ ಎಚ್ಚೆತ್ತುಕೊಳ್ಳಿ 

ಮಾನವನ ಜೀವನದಲ್ಲಿ ಸಾವು ಅನಿವಾರ್ಯವಾದ ಒಂದು ಸತ್ಯ. ಕೆಲವೊಮ್ಮೆ, ಸಾವು ಹತ್ತಿರವಾಗುತ್ತಿರುವಾಗ ದೇಹ ಮತ್ತು ಮನಸ್ಸಿನಲ್ಲಿ ಹಲವಾರು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಗಮನಿಸಿದರೆ ಸಾವಿನ ಸಮೀಪತೆಯನ್ನು ಅಂದಾಜು ಮಾಡಬಹುದು. ವೈದ್ಯಕೀಯ ಆಧಾರದ ಮೇಲೆ ಕೆಲವು ಸಾಮಾನ್ಯ ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ:

ಹಸಿವು ಮತ್ತು ಬಾಯಾರಿಕೆ ಕಡಿಮೆಯಾಗುವುದು:
ವ್ಯಕ್ತಿಯು ತಿನ್ನಲು ಅಥವಾ ಕುಡಿಯಲು ಆಸೆ ತೋರಿಸದೇ, ಆಹಾರವನ್ನು ನಿರಾಕರಿಸುತ್ತಾರೆ.

ದುರ್ಬಲ ಹೃದಯ:
ಹೃದಯವು ದುರ್ಬಲಗೊಳ್ಳಲು ಪ್ರಾರಂಭಿಸಿದರೆ ಮತ್ತು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದರೆ, ಆ ವ್ಯಕ್ತಿಯ ಸಾವು ಹತ್ತಿರದಲ್ಲಿದೆ ಎಂದು ಅರ್ಥಮಾಡಿಕೊಳ್ಳಿ.

ಉಸಿರಾಟದಲ್ಲಿ ಬದಲಾವಣೆ
ಉಸಿರಾಟ ಅನಿಯಮಿತವಾಗುವುದು,ಉಸಿರಾಟದ ಸಮಸ್ಯೆ ನಿರಂತರವಾಗಿ ಮುಂದುವರಿದರೆ ಸಾಮಾನ್ಯವಾಗಿ ಅವರ ಸಾವು ಹತ್ತಿರದಲ್ಲಿದೆ ಎಂದರ್ಥ.

ಮನೋಭಾವ ಮತ್ತು ಬುದ್ಧಿಮತ್ತೆಯಲ್ಲಿ ಬದಲಾವಣೆ
ವ್ಯಕ್ತಿ ಗಾಬರಿಗೊಂಡಂತಾಗಬಹುದು, ನೆನಪಿನ ಸಮಸ್ಯೆ ಕಾಣಿಸಬಹುದು ಅಥವಾ ನಿರ್ಲಿಪ್ತವಾಗಿ ವರ್ತಿಸಬಹುದು.

ಚರ್ಮದ ಬಣ್ಣ ಮತ್ತು ತಾಪಮಾನದಲ್ಲಿ ಬದಲಾವಣೆ
ಕೈ ಮತ್ತು ಕಾಲುಗಳು ತಂಪಾಗುವುದು ಅಥವಾ ನೀಲಿಕಪ್ಪು ಬಣ್ಣಕ್ಕೆ ತಿರುಗುವುದು ಸಾವು ಹತ್ತಿರದಲ್ಲಿದೆ ಎಂದರ್ಥ.

ಈ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿಯಾಗಿ ಕಾಣಿಸಿಕೊಳ್ಳದೆ ಇರಬಹುದು, ಆದರೆ ಇವು ಸಾಮಾನ್ಯವಾಗಿ ಸಾವಿನ ಹತ್ತಿರವಿರುವ ಸೂಚನೆಗಳೆಂದು ಪರಿಗಣಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!