Sunday, October 12, 2025

Interesting Facts |ಉಪ್ಪು ತಿಂದ ಮೇಲೆ ನೀರು ಕುಡಿಬೇಕು ಅಂತ ಅನ್ನಿಸೋದು ಯಾಕೆ?

“ಉಪ್ಪು ತಿಂದವರು ನೀರು ಕುಡಿಲೇಬೇಕು” ಎನ್ನುವ ಗಾದೆಯನ್ನು ನಾವು ಎಲ್ಲರೂ ಕೇಳಿದ್ದೇವೆ. ಆದರೆ, ಉಪ್ಪು ತಿಂದ ತಕ್ಷಣ ದೇಹಕ್ಕೆ ನೀರಿನ ಅವಶ್ಯಕತೆ ಏಕೆ ಹೆಚ್ಚಾಗುತ್ತದೆ ಎಂಬುದು ಅನೇಕರಿಗೆ ಕುತೂಹಲ ಮೂಡಿಸುತ್ತದೆ. ಆದರೆ ಅದಕ್ಕೆ ಉತ್ತರ ಗೊತ್ತಿರೋದಿಲ್ಲ. ಇದರ ಹಿಂದೆ ಸರಳವಾದ ವೈಜ್ಞಾನಿಕ ಕಾರಣವಿದೆ.

ಉಪ್ಪಿನಲ್ಲಿ ಸೋಡಿಯಂ ಅಂಶ ಹೆಚ್ಚು ಇರುತ್ತದೆ. ನಾವು ಉಪ್ಪಿನ ಪದಾರ್ಥಗಳನ್ನು ಸೇವಿಸಿದಾಗ ಶರೀರದಲ್ಲಿ ಸೋಡಿಯಂ ಪ್ರಮಾಣ ಏರುತ್ತದೆ. ದೇಹದಲ್ಲಿ ನೀರು ಮತ್ತು ಸೋಡಿಯಂ ನಡುವೆ ಸಮತೋಲನ ಇರಬೇಕಾಗುತ್ತದೆ. ಈ ಸಮತೋಲನ ಹದಗೆಟ್ಟಾಗ ದೇಹ ತಕ್ಷಣವೇ ಸಮತೋಲನ ಸಾಧಿಸಲು ಪ್ರಯತ್ನಿಸುತ್ತದೆ. ಅದಕ್ಕಾಗಿಯೇ ಬಾಯಾರಿಕೆ ಹೆಚ್ಚಾಗುತ್ತದೆ.

ಇದರಲ್ಲಿಯೇ ಮೆದುಳಿನ ಹೈಪೋಥಾಲಮಸ್ ಎಂಬ ಅಂಗ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತಿರುವುದನ್ನು ಗುರುತಿಸಿ ಮೆದುಳಿಗೆ ಸಂದೇಶ ಕಳುಹಿಸುತ್ತದೆ. ಆ ಸಂದೇಶವೇ ನಮಗೆ ನೀರು ಕುಡಿಯಬೇಕೆಂದು ಸೂಚಿಸುತ್ತದೆ.

ಉಪ್ಪು ತಿಂದ ತಕ್ಷಣ ನೀರು ಕುಡಿಯುವ ಕ್ರಿಯೆ ದೇಹದ ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಇದು ದೇಹದ ನೀರಿನ ಸಮತೋಲನವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹೀಗಾಗಿ ಉಪ್ಪು ಸೇವಿಸಿದ ಬಳಿಕ ಬಾಯಾರಿಕೆ ಆಗುವುದು ಸಹಜ ಮತ್ತು ಆರೋಗ್ಯಕರ ಪ್ರತಿಕ್ರಿಯೆಯಾಗಿದೆ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

error: Content is protected !!